Tuesday, September 8, 2026
spot_imgspot_img
spot_imgspot_img

ಸೆ.9 ರಂದು ‘ನಿಮಿಷ ನ್ಯೂಸ್ ಪುತ್ತೂರು’ ಉದ್ಘಾಟನಾ ಸಮಾರಂಭ

- Advertisement -
- Advertisement -

ಪುತ್ತೂರು: ಸಮಾಜದ ಸಮಯೋಚಿತ ವರದಿ ನೀಡುವ ಉದ್ದೇಶದೊಂದಿಗೆ ಆರಂಭವಾಗುತ್ತಿರುವ ‘ನಿಮಿಷ ನ್ಯೂಸ್ ಪುತ್ತೂರು’ ವಾಹಿನಿಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 09, ಬುಧವಾರ ಸಂಜೆ 4.30ಕ್ಕೆ ಬಪ್ಪಳಿಗೆ ಟವರ್ಸ್, ಬೈಪಾಸ್ ರಸ್ತೆ, ಪುತ್ತೂರಿನಲ್ಲಿ ನಡೆಯಲಿದೆ.

ಹೊಸದಿಗಂತ ದಿನಪತ್ರಿಕೆಯ ಪ್ರಧಾನ ಸಂಪಾದಕ ಪಿ.ಎಸ್. ಪ್ರಕಾಶ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಪುತ್ತೂರು ಆದರ್ಶ ಆಸ್ಪತ್ರೆ, ಹಿರಿಯ ವೈದ್ಯರಾದ ಡಾ. ಎಂ.ಕೆ. ಪ್ರಸಾದ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಕಚೇರಿ ಉದ್ಘಾಟಿಸಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಲೋಗೋ ಅನಾವರಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ, ಕಿಶೋರ್ ಕುಮಾರ್ ಬೊಟ್ಟಾಡಿ ಸದಸ್ಯರು, ವಿಧಾನ ಪರಿಷತ್, ಶ್ರೀಮತಿ ಸ್ಟೆಲ್ಲಾ ವರ್ಗೀಸ್ ಉಪ ವಿಭಾಗಾಧಿಕಾರಿ ಪುತ್ತೂರು, ನಳಿನ್ ಕುಮಾರ್ ಕಟೀಲ್ ಮಾಜಿ ಸಂಸದರು, ಪ್ರಮೋದ್ ಕುಮಾರ್ ಬಿ. ಉಪ ಪೊಲೀಸ್ ಅಧೀಕ್ಷಕರು ಪುತ್ತೂರು, ಎಸ್. ಆರ್. ಸತೀಶ್ಚಂದ್ರ ಅಧ್ಯಕ್ಷರು, ಕ್ಯಾಂಪ್ಕೋ ಪುತ್ತೂರು, ಸಂಜೀವ ಮಠಂದೂರು ಮಾಜಿ ಶಾಸಕರು, ಅರುಣ್ ಶ್ಯಾಮ್ ಖ್ಯಾತ ವಕೀಲರು, ಹೈಕೋರ್ಟ್ ಕರ್ನಾಟಕ, ಶ್ರೀಮತಿ ಶಕುಂತಳಾ ಟಿ. ಶೆಟ್ಟಿ ಮಾಜಿ ಶಾಸಕಿ, ಜಾನ್ಸನ್ ಕಿರಣ್ ಡಿ’ಸೋಜಾ ಸರ್ಕಲ್ ಇನ್ಸ್‌ಪೆಕ್ಟರ್ ಪುತ್ತೂರು, ಡಾ. ಯು. ಪಿ. ಶಿವಾನಂದ ಅಧ್ಯಕ್ಷರು, ಸುದ್ದಿ ಸಮೂಹ ಸಂಸ್ಥೆಗಳು ಪುತ್ತೂರು, ಉಜ್ವಲ್ ಪ್ರಭು ಉದ್ಯಮಿ, ಯು.ಆರ್. ಪ್ರಾಪರ್ಟೀಸ್, ಸುಧಾಕರ ತಿಂಗಳಾಡಿ ಅಧ್ಯಕ್ಷರು, ಪತ್ರಕರ್ತರ ಸಂಘ ಪುತ್ತೂರು, ರಾಮದಾಸ್ ಶೆಟ್ಟಿ ವಿಟ್ಲ ಅಧ್ಯಕ್ಷರು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು, ಅಶೋಕ್ ಶೆಣೈ, ಅಮರನಾಥ್ ಗೌಡ ಮಾಲಕರು ಬಪ್ಪಳಿಗೆ ಟವರ್ಸ್ ಪುತ್ತೂರು ಇವರು ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!