Thursday, September 10, 2026
spot_imgspot_img
spot_imgspot_img

ಬರಪೀಡಿತ ತಾಲೂಕುಗಳ ಸಂಖ್ಯೆ 200 ಮೀರಬಹುದು : ಡಿಸಿಎಂ ಜಿ.ಪರಮೇಶ್ವರ್

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಸರಕಾರ ಗಂಭೀರವಾಗಿದೆ. ಈಗಾಗಲೆ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೇವೆ. ಇನ್ನೂ 42 ತಾಲೂಕುಗಳಲ್ಲಿ ಅಧ್ಯಯನ ನಡೆಯುತ್ತಿದೆ. ಬರಪೀಡಿತ ತಾಲೂಕುಗಳ ಸಂಖ್ಯೆ 200ಕ್ಕೂ ಮೀರಬಹುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವ‌ರ್ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 42 ತಾಲೂಕುಗಳಲ್ಲಿ ಅಧ್ಯಯನ ನಡೆಯುತ್ತಿದೆ. ನಿನ್ನೆಯವರೆಗೆ 24 ತಾಲೂಕುಗಳ ಅಧ್ಯಯನ ಪ್ರಕ್ರಿಯೆ ಮುಗಿದಿದ್ದು, ಇನ್ನೂ 18 ತಾಲೂಕುಗಳ ಅಧ್ಯಯನ ಇಂದು ಅಥವಾ ನಾಳೆ ವೇಳೆಗೆ ಮುಗಿಯುತ್ತದೆ. ಆನಂತರ, ಬರಪೀಡಿತ ಇತರ ತಾಲೂಕುಗಳಹೆಸರನ್ನು ಪ್ರಕಟಿಸುತ್ತೇವೆ ಎಂದು ಹೇಳಿದರು.

ಮಳೆಗಾಲ ಅಧಿಕೃತ ಮುಗಿಯುವವರೆಗೆ ಈ ಮೌಲ್ಯಮಾಪನ ಮಾಡುತ್ತೇವೆ. ಕಳೆದ ವರ್ಷ 200ಕ್ಕೂ ಹೆಚ್ಚು ತಾಲೂಕು ಬರಪೀಡತ ಎಂದು ಘೋಷಿಸಲಾಗಿತ್ತು. ಈ ವರ್ಷ ಅದಕ್ಕಿಂತ ಹೆಚ್ಚಾಗಬಹುದು. ಕರಾವಳಿ ಬಿಟ್ಟು ಬೇರೆ ಎಲ್ಲಿಯೂ ಮಳೆಯಾಗಿಲ್ಲ. ಕೇಂದ್ರ ಸರಕಾರವು 2020ರಲ್ಲಿ ಬರಪೀಡಿತ ಪ್ರದೇಶ ಎಂದು ಘೋಷಿಸಲು ನಿಗದಿ ಮಾಡಿರುವ ಮಾನದಂಡಗಳ ಆಧಾರದ ಮೇಲೆಯೆ ನಾವು ತೀರ್ಮಾನ ಮಾಡಬೇಕಿದೆ ಎಂದು ಅವರು ಹೇಳಿದರು.ಮಾನದಂಡಗಳನ್ನು ಸರಳೀಕರಣ ಮಾಡುವಂತೆ ನಾನು ಹಾಗೂ ಮುಖ್ಯಮಂತ್ರಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಆದರೆ, ಈವರೆಗೆ ಅವರಿಂದ ಯಾವುದೆ ಪ್ರತಿಕ್ರಿಯೆ ಬಂದಿಲ್ಲ. ಇಡೀ ರಾಜ್ಯ ಭೀಕರ ಬರಗಾಲ ಎದುರಿಸುತ್ತಿದೆ.

ಕೇಂದ್ರ ಸರಕಾರಕ್ಕೆ ಇನ್ನೆರಡು ದಿನಗಳಲ್ಲಿ ಸರಕಾರದ ವತಿಯಿಂದ ಅಧಿಕೃತ ಜ್ಞಾಪನಾ ಪತ್ರವನ್ನು ಸಲ್ಲಿಸಲಾಗುವುದು ಎಂದು ಪರಮೇಶ್ವ‌ರ್ ತಿಳಿಸಿದರು.101 ತಾಲೂಕಿನಲ್ಲಿ 18 ಸಾವಿರ ಕೋಟಿ ರೂ.ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ನಾವು ಎನ್‌ಡಿಆ‌ರ್ ಎಫ್‌ ಮಾರ್ಗಸೂಚಿ ಅನ್ವಯ ಪರಿಹಾರ ಬಿಡುಗಡೆಗೆ ಮನವಿ ಮಾಡುತ್ತೇವೆ. ಕಳೆದ ವರ್ಷ 39 ಸಾವಿರ ಕೋಟಿ ರೂ. ನಷ್ಟ ಆಗಿತ್ತು. ಆದರೆ, ನಮಗೆ ಪರಿಹಾರ ಬಿಡುಗಡೆ ಮಾಡಿರಲಿಲ್ಲ. ಕೊನೆಗೆ ನಾವು ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿದೆವು,

ಕಾನೂನು ಹೋರಾಟ ಮಾಡಿದೆವು. ಬಳಿಕ ಸುಪ್ರೀಂಕೋರ್ಟ್ ನಿರ್ದೇಶನದಂತೆ ನಮಗೆ 3500 ಕೋಟಿ ರೂ.ಕೇಂದ್ರ ಸರಕಾರ ಬಿಡುಗಡೆ ಮಾಡಿತು ಎಂದು ಅವರು ಸ್ಮರಿಸಿದರು.

ಈ ಬಾರಿ ಆ ರೀತಿ ಆಗುವುದಿಲ್ಲ. ಕೇಂದ್ರ ಸರಕಾರ ನಮ್ಮಬೇಡಿಕೆಗೆ ಮನ್ನಣೆ ಕೊಡುತ್ತದೆ ಎಂದು ಭಾವಿಸಿದ್ದೇನೆ. ಅಗತ್ಯವಿದ್ದರೆ ಸರ್ವ ಪಕ್ಷಗಳ ನಿಯೋಗವನ್ನು ಕೇಂದ್ರದ ಬಳಿ ತೆಗೆದುಕೊಂಡು ಹೋಗುತ್ತೇವೆ. ರೈತರ ಸಾಲ ಮನ್ನಾ ಮಾಡಿ ಎಂದು ಆಗ್ರಹಿಸುವ ಬಿಜೆಪಿ ನಾಯಕರು, ಕೇಂದ್ರದಲ್ಲಿರುವ ಅವರದೆ ಪಕ್ಷದ ಸರಕಾರಕ್ಕೆ ಮನವಿ ಮಾಡಿ, ರಾಜ್ಯಕ್ಕೆ ಅನುದಾನ ಕೊಡಿಸಲಿ ಎಂದು ಪರಮೇಶ್ವ‌ರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

- Advertisement -

Related news

error: Content is protected !!