- Advertisement -
- Advertisement -
ಸೆ.13 ರಂದು ವಿಟ್ಲದಿಂದ ಭವ್ಯ ವಾಹನ ಜಾಥಾ





ವಿಟ್ಲ: ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ವತಿಯಿಂದ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಕಿರೀಟ ಸಮರ್ಪಣೆ ನಡೆಯಲಿದ್ದು, ಈ ಪ್ರಯುಕ್ತ ಸೆ.13 ನೇ ಆದಿತ್ಯವಾರ ಬೆಳಗ್ಗೆ 9.30ಕ್ಕೆ ವಿಟ್ಲ ನವಿಲು ಬಸದಿಯಿಂದ ವಾಹನ ಜಾಥಾ ಮೂಲಕ ಮೆರವಣಿಗೆ ಆರಂಭಗೊಂಡು ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ತನಕ ಸಾಗಲಿದೆ.
ಬೆಳಗ್ಗೆ 11.30ಕ್ಕೆ ಶ್ರೀ ಗಣಪತಿ ದೇವರ ಮೂರ್ತಿಯು ಬಂಟ್ವಾಳದಿಂದ ವಾಹನ ಜಾಥಾ ಮೂಲಕ ಸಾಗಿ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನವನ್ನು ತಲುಪಲಿದೆ.
ಈ ಪುಣ್ಯ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಗಣೇಶೋತ್ಸವ ಸಮಿತಿ, ಕೆಲಿಂಜ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -








