Thursday, September 10, 2026
spot_imgspot_img
spot_imgspot_img

(ಸೆ.11) ವಿಟ್ಲ: ಭಗವತಿ ದೇವಸ್ಥಾನದಲ್ಲಿ ನಾಟ್ಯನಿಲಯಂ ಮಂಜೇಶ್ವರ ತಂಡದಿಂದ ‘ನೃತ್ಯ ಮೋಹಕಂ’

- Advertisement -
- Advertisement -

ವಿಟ್ಲ: ಕಲಾ ತಪಸ್ವಿ, ನಾಟ್ಯಕಲಾ ಸಿಂಧು, ನಾಟ್ಯನಿಲಯಂ ಗುರು ಬಾಲಕೃಷ್ಣ ಮಂಜೇಶ್ವರ ಇವರ ದಕ್ಷ ನಿರ್ದೇಶನದಲ್ಲಿ ‘ನೃತ್ಯ ಮೋಹಕಂ’ ಕಾರ್ಯಕ್ರಮವು ವಿಟ್ಲದ ಭಗವತಿ ದೇವಸ್ಥಾನದಲ್ಲಿ ಸೆ.11 ಶುಕ್ರವಾರ ಸಂಜೆ 6 ಗಂಟೆಯಿಂದ ಜರುಗಲಿದೆ.

ನಾಟ್ಯನಿಲಯಂ ಮಂಜೇಶ್ವರ ತಂಡದಿಂದ ನಟ್ಟುವಾಂಗಂ ಮತ್ತು ನಾಟ್ಯ ನಿಲಯಂ ನೃತ್ಯ ವೈಭವ ಪ್ರಸ್ತುತಗೊಳ್ಳಲಿದ್ದು, ನೃತ್ಯ ನಿರ್ದೇಶನವನ್ನು ಬಾಲಕೃಷ್ಣ ಮಂಜೇಶ್ವರ ನಿರ್ವಹಿಸಿರುತ್ತಾರೆ.

ಮೃದಂಗದಲ್ಲಿ ಪ್ರಭಾಕರನ್ ನೀಲೇಶ್ವರ, ತಬಲಾದಲ್ಲಿ ತಂಬಾನ್ ಮಾಣಿಯಾಟ್, ಕೀಪ್ಯಾಡ್‌ನಲ್ಲಿ ಬಾಲಕೃಷ್ಣನ್ ಕಾಞ್ಞಂಗಾಡ್, ಕೊಳಲಿನಲ್ಲಿ ಜಿನೇಶ್ ಪಯ್ಯನ್ನೂರ್ ಸಹಕರಿಸಲಿದ್ದಾರೆ.

ಹಾಡುಗಾರಿಕೆಯನ್ನು ಉಣ್ಣಿಕೃಷ್ಣನ್ ವೀಣಾಲಯಮ್ ನೀಲೇಶ್ವರ, ಸುರೇಶ್ ಕಾಞ್ಞಂಗಾಡ್ ಮತ್ತು ವಿಠಲ ಶೆಟ್ಟಿ ಕಾಸರಗೋಡ್ ನಡೆಸಿಕೊಡಲಿದ್ದು, ಕಾಂಗೋದಲ್ಲಿ ವಿನೋದ್ ಕಾಞ್ಞಂಗಾಡ್, ರಿದಂ ಪ್ಯಾಡ್‌ನಲ್ಲಿ ರಾಜೇಶ್ ಕಳ್ನಾಡ್, ವ್ಯವಸ್ಥೆಯಲ್ಲಿ ಕಿರಣ್ ಮಾಸ್ಟರ್ ಮಂಜೇಶ್ವರ ಹಾಗೂ ವರ್ಣಾಲಂಕಾರದಲ್ಲಿ ಶ್ರೀಮತಿ ನಮಿತಾ ಸಹಕರಿಸಲಿದ್ದಾರೆ.

- Advertisement -

Related news

error: Content is protected !!