Saturday, November 7, 2026
spot_imgspot_img
spot_imgspot_img

ಸೌದಿ ಅರೇಬಿಯಾದ ತೈಲ ಪೈಪ್‌ಲೈನ್ ಮೇಲೆ ದಾಳಿ – ಕಚ್ಚಾ ತೈಲ ದರ ಏರಿಕೆ

- Advertisement -
- Advertisement -

ರಿಯಾದ್‌: ಹಾರ್ಮುಜ್ ಜಲಸಂಧಿಯನ್ನು ಬೈಪಾಸ್ ಮಾಡಿ ತೈಲ ಸರಬರಾಜು ಮಾಡುತ್ತಿದ್ದ ಸೌದಿ ಅರೇಬಿಯಾದ ಪೈಪ್‌ಲೈನ್‌ ಮೇಲೆ ಡ್ರೋನ್‌ ದಾಳಿ ನಡೆದಿದೆ.

ದಾಳಿಯ ಬೆನ್ನಲ್ಲೇ ತೈಲ ಪೈಪ್‌ಲೈನ್ ಕಾರ್ಯಾಚರಣೆಯನ್ನು ಸೌದಿ ಅರೇಬಿಯಾ ಸ್ಥಗಿತಗೊಳಿಸಿದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಏರಿಕೆ ಕಂಡಿವೆ.

ಡಬ್ಲ್ಯುಟಿಐ ಮತ್ತು ಬ್ರೆಂಟ್ ಕಚ್ಚಾ ತೈಲ ದರಗಳು ಶೇ. 3ಕ್ಕಿಂತ ಹೆಚ್ಚು ಜಿಗಿದಿದ್ದು, ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 108 ಡಾಲರ್‌ಗೆ ತಲುಪಿದೆ.

ಇರಾಕ್ ಮೂಲದಿಂದ ಬಂದ ಹಲವು ಡ್ರೋನ್‌ಗಳು ರಿಯಾದ್ ಮತ್ತು ಮದೀನಾ ಪ್ರದೇಶಗಳಲ್ಲಿರುವ ಪೂರ್ವ-ಪಶ್ಚಿಮ ಪೈಪ್‌ಲೈನ್‌ ಮೇಲೆ ದಾಳಿ ನಡೆಸಿ ಆಸ್ತಿಪಾಸ್ತಿ ಹಾನಿ ಹಾಗೂ ಕೆಲವರಿಗೆ ಗಾಯ ಉಂಟುಮಾಡಿವೆ ಎಂದು ಸೌದಿ ವಿದೇಶಾಂಗ ಸಚಿವಾಲಯ ದೃಢಪಡಿಸಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!