



ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ 55ನೇ ವರ್ಷದ ಮಹಾಗಣೇಶೊತ್ಸವವು ಸೆ.14ಸೋಮವಾರದಿಂದ ಸೆ.16 ಬುಧವಾರದ ತನಕ ಧರ್ಮನಗರ ಸಮಾಜ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.


ಸೆ.14ಸೋಮವಾರದಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ಶ್ರೀ ಮಹಾಗಣಪತಿ ಪ್ರತಿಷ್ಠೆ ಮತ್ತು ಉತ್ಸವದ ಉದ್ಘಾಟನೆ ನಡೆದು, ದ್ವಜಾರೋಹಣವನ್ನು ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷರಾದ ಎಚ್ ಜಗನ್ನಾಥ ಸಾಲ್ಯಾನ್ , ಉದ್ಘಾಟನೆಯನ್ನು ಬಾಬು ಆಚಾರ್ಯ , ಮೂರ್ತಿ ಪ್ರತಿಷ್ಠೆಯನ್ನು ವೇ|ಮೂ| ಗೋಪಾಲಕೃಷ್ಣ ಭಟ್ ಮಿತ್ತೂರು ನೆರವೇರಿಸಿದರು, ಮಧ್ಯಾಹ್ನ ಪೂಜಾ ಸೇವೆ ಪ್ರಾರಂಭಗೊಂಡು, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಸೇವೆ, ರಶಪ್ರಶ್ನೆ ಸ್ಪರ್ಧೆ , ರಾತ್ರಿ ಮಹಾಪೂಜೆ , ಪ್ರಸಾದ ವಿತರಣೆ ಹಾಗೂ ಧರ್ಮನಗರದ ಬಾಲಗೋಕುಲ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.


ಸೆ.15 ಮಂಗಳವಾರದಂದು ಬೆಳಿಗ್ಗೆ ಪೂಜಾ ಸೇವೆ , 55 ಕೆ.ಜಿ. ಸಾರ್ವಜನಿಕ ಕಬಡ್ಡಿ ಪಂದ್ಯಾಟ, ಗಣೇಶೋತ್ಸವ ಸಮಿತಿ ಧರ್ಮನಗರ ಇವರಿಂದ ಭಜನಾ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ರಾಮಾಂಜನೇಯ ಭಜನಾ ತಂಡ ಪೆರ್ನೆ ಇವರಿಂದ ಭಜನಾ ಸೇವೆ, ಸಂಜೆ ಸಾಮೂಹಿಕ ಕುಂಕುಮಾರ್ಚನೆ, ರಾತ್ರಿ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು .
ಶ್ರೀ ಮಹಾಗಣೇಶೋತ್ಸವದ ಸಮಾರೋಪ ದಿನವಾದ ದಿನಾಂಕ ಸೆ. 16 ಬುಧವಾರ ಬೆಳಿಗ್ಗೆ ಪೂಜಾ ಸೇವೆ , ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಹೂವಿನ ಹಾರ ಸ್ಪರ್ಧೆ, ಅಪರಾಹ್ನ ಮಹಾಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಅಪರಾಹ್ನ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮಂಗಳೂರು ಎ.ಜೆ ಹಾಸ್ಪಿಟಲ್ ಕನ್ಸಲ್ಟೆಂಟ್ ಗ್ಯಾಸ್ಟ್ರೋ ಸರ್ಜನ್ ಡಾ. ಅಶ್ವಿನ್ ಆಳ್ವ, ಅತಿಥಿಯಾಗಿ ಪುತ್ತೂರಿನ ಯು. ಆರ್ ಪ್ರಾಪಟೀಸ್ ಉದ್ಯಮಿ ಉಜ್ವಲ್ ಪ್ರಭು ಅವರು ಭಾಗವಹಿಸಿದರು.


ಮಧ್ಯಾಹ್ನ ಮಹಾಮಂಗಳಾರತಿ, ದಿಗ್ವಿಜಯೋತ್ಸವ, ವಂದೇ ಮಾತರಂ,ಮೂರ್ತಿ ಜಲಸ್ಥಂಬನ , ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ವಿಷ್ಣುನಗರ ಕುಂಡಡ್ಕ ತಂಡದಿಂದ ವಿಶೇಷ ಆಕರ್ಷಣೆ, ಕುಣಿತ ಭಜನೆ ನಡೆಯಿತು.








