Monday, September 21, 2026
spot_imgspot_img
spot_imgspot_img

ಮೈಸೂರು ದಸರಾ ಕಂಬಳ: ನೋಂದಣಿ ಆರಂಭ; ಸೆ.30 ಅರ್ಜಿ ಸಲ್ಲಿಕೆಗೆ ಕೊನೆ ದಿನ

- Advertisement -
- Advertisement -

ಮೈಸೂರು: ಮೈಸೂರು ದಸರಾ-2026ರ ಅಂಗವಾಗಿ ಮೊದಲ ಬಾರಿಗೆ ದಸರಾ ಕಂಬಳ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಸಾತಗಳ್ಳಿ ಹೊರವರ್ತುಲ ರಸ್ತೆಯಲ್ಲಿರುವ VTU ಪ್ರಾದೇಶಿಕ ಕೇಂದ್ರದ ಹತ್ತಿರ ಕ್ರೀಡಾಕೂಟ ನಡೆಯಲಿದೆ.ಕಂಬಳದ ಕೋಣಗಳ ಮಾಲೀಕರು ಮತ್ತು ಕೋಣಗಳನ್ನು ಓಡಿಸುವವರು ವಿವಿಧ ಸ್ಪರ್ಧಾ ವಿಭಾಗಗಳ ಅಡಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಆಸಕ್ತರು ಸೆಪ್ಟೆಂಬರ್ 30ರೊಳಗಾಗಿ ಅರ್ಜಿ ಸಲ್ಲಿಸಬೇಕು. https://mysoredasara.gov.in ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಜಿಲ್ಲಾ ಪಂಚಾಯತ್ ಕಚೇರಿಯಿಂದ ಪ್ರಾಧಿಕಾರದ ಸಹಿ ಇರುವ ಭೌತಿಕ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಕಂಬಳ ಉಪ ಸಮಿತಿಯ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!