


ವಿಟ್ಲ ಅಧ್ಯಾಪಕರ ಸಹಕಾರಿ ಸಂಘ ವಿಟ್ಲ ಇದರ 2025-26ನೇ ಸಾಲಿನ ಮಹಾಸಭೆಯು ವಿಟ್ಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ರಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರು ಹಾಗೂ ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ರಿಯಾಝ್ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಲ್ಲದೆ, ಸಂಘದ ಸದಸ್ಯರ ಪ್ರತಿಭಾನ್ವಿತ 85 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ನವೀನ್ ಪಿ.ಎಸ್. ಹಾಗೂ ನಿರ್ದೇಶಕರಾದ ಪುಷ್ಪರಾಜ್ ಬಿ., ಡಾ. ನವೀನ್ ಕೋಣಾಜೆ, ಅನಿತಾ ಮಿನೇಜಸ್, ಭಾರತಿ, ಉಮಾನಾಥ ರೈ ಎಂ., ಶಿವಕುಮಾರ್ ಎಂ.ಜಿ., ನಾಗೇಶ್ ಪಾಟಾಳಿ ಕೆ., ಸಂದೇಶ್ ಎಂ.ಎಸ್., ರಘು, ರವಿ ನಾಯ್ಕ ಐ., ಲಕ್ಷ್ಮೀಕಾಂತ್ ಬೇಕಲ್ ಎಸ್., ಶ್ರೀಧರ ಎನ್., ಶೀನಪ್ಪ ಎನ್. ಹಾಗೂ ಅಖಿಲ್ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷರಾದ ರಮೇಶ್ ನಾಯಕ್ ಅವರು ಸ್ವಾಗತಿಸಿ, ಸದಸ್ಯರಿಗೆ 16% ಡಿವಿಡೆಂಡ್ ಘೋಷಿಸಿದರು.
ಸಂಘದ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದ ಜನರಲ್ ಮ್ಯಾನೇಜರ್ ಸುಚಿನ್ ರಾಜ್ ಶೆಟ್ಟಿ ಅವರು, ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು ₹8,07,57,76,642.66 ಮೊತ್ತದ ವ್ಯವಹಾರ ನಡೆಸಿದ್ದು, ₹2,13,50,091.29 ಲಾಭ ಗಳಿಸಿದೆ ಎಂದು ತಿಳಿಸಿದರು.
ಉಪಾಧ್ಯಕ್ಷರಾದ ನವೀನ್ ಪಿ.ಎಸ್. ಹಾಗೂ ನಿರ್ದೇಶಕರಾದ ಉಮಾನಾಥ ರೈ ಅವರು ವಂದಿಸಿದರು. ನಿರ್ದೇಶಕರಾದ ರಾಜೇಂದ್ರ ರೈ ಕಾರ್ಯಕ್ರಮವನ್ನು ನಿರೂಪಿಸಿದರು.16.25% ಡಿವಿಡೆಡ್ ಸದಸ್ಯರ ಅಪೇಕ್ಷೆಯ ಮೇರೆಗೆ 16% ಇದ್ದ ದನ್ನು 16.25%ಕ್ಕೆ ಮಾಡಲಾಯಿತು.








