Monday, September 21, 2026
spot_imgspot_img
spot_imgspot_img

ತುಳುವಿಗೆ ಸಿಕ್ಕ ಮಾನ್ಯತೆ ಉರ್ದುವಿಗೂ ನೀಡಿ: ಮುಖ್ಯಮಂತ್ರಿಗೆ SDPI ಆಗ್ರಹ – ಯು.ಟಿ.ಖಾದರ್ ಪ್ರತಿಕ್ರಿಯೆ

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಕರಾವಳಿಯ ತುಳು ಭಾಷೆಗೆ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿದ ಬಳಿಕ ಇದೀಗ ಉರ್ದು ಭಾಷೆಗೂ ಅಧಿಕೃತ ಭಾಷೆಯ ಬೇಡಿಕೆ ಜೋರಾಗಿದೆ.

ಈ ಸಂಬಂಧ SDPIಯಿಂದ ಮುಖ್ಯಮಂತ್ರಿ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದೆ. 2011ರ ಜನಗಣತಿ ದತ್ತಾಂಶದಲ್ಲಿ ಉರ್ದು ಕೂಡ ಕರ್ನಾಟಕದ ಮಾತೃಭಾಷೆಗಳ ಪಟ್ಟಿಯಲ್ಲಿದೆ. ‘ಉರ್ದು ಭಾಷೆಗೆ ಅಧಿಕೃತ ಮಾನ್ಯತೆ ನೀಡಿ’ ಉರ್ದು ಕೇವಲ ಮಾತಾಡುವ ಭಾಷೆ ಅಲ್ಲ, ಕಲೆ ಸಾಹಿತ್ಯ ಪತ್ರಿಕೋದ್ಯಮ ಶಿಕ್ಷಣ ಸೇರಿದ ಶತಮಾನದ ಸಾಂಸ್ಕೃತಿಕ ಪರಂಪರೆ ಇದೆ.

ರಾಜ್ಯದಲ್ಲಿ ಒಟ್ಟು 4,236 ಉರ್ದು ಸರ್ಕಾರಿ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಿವೆ. ಹೀಗಾಗಿ ಉರ್ದು ಭಾಷೆಗೂ ಕರ್ನಾಟಕದಲ್ಲಿ ಅಧಿಕೃತ ಹಾಗೂ ವ್ಯವವಾರಿಕ ಸ್ಥಾನ ನೀಡುವಂತೆ ಪತ್ರ ಬರೆದು ಆಗ್ರಹಿಸಿದ್ದಾರೆ.

  • *ಉರ್ದು ಭಾಷೆಗೂ ರಾಜ್ಯದ ಅಧಿಕೃತ ಸ್ಥಾನ ನೀಡಬೇಕು
  • *ಉರ್ದುವನ್ನು ರಾಜ್ಯದ ಆಡಳಿತ ಭಾಷೆಯಾಗಿ ಹಂತ ಹಂತವಾಗಿ ವ್ಯವಸ್ಥೆ ರೂಪಿಸಬೇಕು
  • *ಸರ್ಕಾರಿ ಕಚೇರಿಗಳಲ್ಲಿ ಉರ್ದು ಭಾಷೆಯ ಮೂಲಕ ಅರ್ಜಿ, ಸೇವಾ ಮಾಹಿತಿ ಸೇರಿದ ಇತರೆ ಸೌಲಭ್ಯ ನೀಡಬೇಕು
  • *ಉರ್ದು ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆ ಶೀಘ್ರವೇ ಭರ್ತಿ ಮಾಡಬೇಕು
  • *ಉರ್ದು ಭಾಷೆಯ ಸಾಹಿತ್ಯ, ಸಂಸ್ಕೃತಿಗೆ ಕೊಡುವ ಅನುದಾನ ಪ್ರೋತ್ಸಾಹ ಹೆಚ್ಚಿಸಬೇಕು
  • *ಸರ್ಕಾರಿ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಯ ಸೇವೆಗಳ ಮಾಹಿತಿಯನ್ನು ಉರ್ದುವಿನಲ್ಲೂ ನೀಡಬೇಕು.

ತುಳು ಭಾಷೆಯಂತೆ ಉರ್ದು ಭಾಷೆಗೆ ರಾಜ್ಯ ಮಾನ್ಯತೆಗೆ ಆಗ್ರಹಿಸಿರುವ ಬಗ್ಗೆ ಮಾತಾಡಿದ ಸಚಿವ ಯು.ಟಿ.ಖಾದರ್ ಅವರು, ಪ್ರತಿಯೊಂದು ಭಾಷೆ ಈ ರಾಜ್ಯದಲ್ಲಿ ತನ್ನದೇ ಆದ ಕೊಡುಗೆ ಕೊಟ್ಟಿದೆ. ಬೇಡಿಕೆ ಇಡುವುದರಲ್ಲಿ ತಪ್ಪಿಲ್ಲ. ಸರ್ಕಾರ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತೆ ಎಂದಿದ್ದಾರೆ.

ತುಳು ಭಾಷೆಗೆ ಬಹಳಷ್ಟು ಹಿಂದೆಯಿಂದಲೂ ನಮ್ಮ ಬೇಡಿಕೆ ಇತ್ತು. ಭಾಷೆ ಅಂದ್ರೆ ನಾವು ಮಾತನಾಡುವ ಮಾತು ಮಾತ್ರ ಅಲ್ಲ, ಭಾಷೆ ಅಂದ್ರೆ ಅದು ಒಂದು ಊರಿನ ಸಂಸ್ಕೃತಿ, ಪರಂಪರೆ ನಾವು ಹಾಕುವ ಬಟ್ಟೆ ಊಟ ಮಾಡುವ ವ್ಯವಸ್ಥೆ, ಜಾನಪದ ಕ್ರೀಡೆ, ಸಂಸ್ಕೃತಿ, ಸಾಹಿತ್ಯ ಎಲ್ಲವೂ ಸೇರಿದ್ರೆ ಭಾಷೆ. ಅವೆಲ್ಲ ಉಳಿಯಬೇಕು ಅಂದ್ರೆ ಭಾಷೆ ಉಳಿಯಬೇಕು. ಭಾಷೆ ಉಳಿದ್ರೆ ಇವೆಲ್ಲಾ ಉಳಿಯುತ್ತೇವೆ. ತುಳು ಭಾಷೆಯನ್ನ ಎರಡನೇ ಭಾಷೆಯನ್ನಾಗಿ ಘೋಷಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದ್ರು.

ಉರ್ದು ಭಾಷೆ ಸೇರಿದಂತೆ ಬೇರೆ ಬೇರೆ ಭಾಷೆಗಳ ಬೇಡಿಕೆ ಇದೆ. ಆ ಬೇಡಿಕೆ ತಪ್ಪಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ. ಸರ್ಕಾರ ಕೂಡ ಅದಕ್ಕೆ ಸ್ಪಂದಿಸುತ್ತೆ ಅನ್ನೋ ವಿಶ್ವಾಸ ಇದೆ ಎಂದಿದ್ದಾರೆ.

- Advertisement -

Related news

error: Content is protected !!