- Advertisement -
- Advertisement -






ರಾಮಕುಂಜ: ಊಟ ಮಾಡಿ ಮಲಗಿದ್ದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೆ.22ರಂದು ರಾಮಕುಂಜದಲ್ಲಿ ನಡೆದಿದೆ. ಮೃತರನ್ನು ಸಚಿನ್ (33) ಎಂದು ಗುರುತಿಸಲಾಗಿದೆ.ಮಧ್ಯಾಹ್ನ ಊಟ ಮಾಡಿ ಮಲಗಿದ್ದ ಸಚಿನ್ ಅವರನ್ನು ಸಂಜೆ 3 ಗಂಟೆ ಸುಮಾರಿಗೆ ತಾಯಿ ಎಬ್ಬಿಸಲು ಬಂದಾಗ ಜೋರಾಗಿ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರನ್ನು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸಚಿನ್ ಅವರು ಕಳೆದ ಒಂದೂವರೆ ವರ್ಷದಿಂದ ಕೆಸಿಡಿಸಿ ಮಂಗಳೂರು ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು ಕಾಜರುಕ್ಕುದಲ್ಲಿ ಬೈಕ್ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದರು ಎನ್ನಲಾಗಿದೆ.ಮೃತರ ಸಹೋದರ ಚರಣ್ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -








