Friday, September 25, 2026
spot_imgspot_img
spot_imgspot_img

ಸಿಕ್ಕಿಂನಲ್ಲಿ ಮಧ್ಯರಾತ್ರಿ ಭೀಕರ ಭೂಕುಸಿತ; ನಾಲ್ವರು ಮೃತ, 128ಕ್ಕೂ ಹೆಚ್ಚು ಜನ ಸ್ಥಳಾಂತರ

- Advertisement -
- Advertisement -

ಗ್ಯಾಂಗ್ಟಾಕ್‌ : ಸಿಕ್ಕಿಂನ ತಡಾಂಗ್‌ನಲ್ಲಿ ಗುರುವಾರ ತಡರಾತ್ರಿ ಭಾರಿ ಮಳೆಯಾದ ಕಾರಣ ರಿಂಬಿ ನದಿ ಸುತ್ತಲಿನ ಪ್ರದೇಶದ ಕೆಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ.

ಮಧ್ಯರಾತ್ರಿಯಿಂದಲೂ ಗುಡ್ಡದಿಂದ ಕೊಚ್ಚಿಬರುತ್ತಿರುವ ಭಾರಿ ಪ್ರಮಾಣದ ಮಣ್ಣು ಮತ್ತು ಬಂಡೆಗಳು ನೇರವಾಗಿ ಜನವಸತಿ ಪ್ರದೇಶಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಈವರೆಗೂ ನಾಲ್ವರು ಮೃತಪಟ್ಟಿದ್ದಾರೆ. ತೀವ್ರ ಅಪಾಯದ ವಲಯದಲ್ಲಿದ್ದ 128ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗಾಗಿ ಸಿಂಗ್ಲಿತಾಮ್‌ನಲ್ಲಿ ತುರ್ತು ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ.

ಭೂಕುಸಿತ ಪರಿಣಾಮ ಮಣ್ಣಿನ ಅವಶೇಷಗಳು ರಸ್ತೆಯ ಮೇಲೆ ಬಿದ್ದಿರುವುದರಿಂದ ರಿಂಬಿ-ಯುಕ್ಸೋಮ್ ಮುಖ್ಯ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ.

ರಿಂಬಿ ನದಿಗೆ ಅಡ್ಡಲಾಗಿ ಮಣ್ಣು ಕುಸಿದಿರುವುದರಿಂದ, ನೀರು ತನ್ನ ದಿಕ್ಕನ್ನು ಬದಲಾಯಿಸಿ ರಸ್ತೆ ಮತ್ತು ಸುತ್ತಮುತ್ತಲಿನ ಭೂಮಿಯನ್ನು ಸವೆಯುವಂತೆ ಮಾಡುತ್ತಿದೆ. ಪರಿಣಾಮ ಕೃತಕ ಸರೋವರ ನಿರ್ಮಾಣವಾಗುವ ಭೀತಿ ಎದುರಾಗಿದ್ದು, ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

- Advertisement -

Related news

error: Content is protected !!