Friday, September 25, 2026
spot_imgspot_img
spot_imgspot_img

ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. 7ನೇ ಕಬಕ ಶಾಖೆಯ ಉದ್ಘಾಟನಾ ಸಮಾರಂಭ

- Advertisement -
- Advertisement -

ಕಬಕ: ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ನೂತನ 7ನೇ ಕಬಕ ಶಾಖೆಯ ಉದ್ಘಾಟನಾ ಸಮಾರಂಭವು ಸೆ. 26 ಶನಿವಾರದಂದು ಪೂರ್ವಾಹ್ನ 11 ಗಂಟೆಗೆ ಬ್ರೈಟ್ ಕಾಂಪ್ಲೆಕ್ಸ್ ಕಬಕ ಇಲ್ಲಿ ಜರುಗಲಿರುವುದು.

ಸಮಾರಂಭದಲ್ಲಿ ಅಶೋಕ್ ಕುಮಾರ್ ರೈ ಮಾನ್ಯ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ ಇವರು ನೂತನ ಕಛೇರಿಯನ್ನು ಉದ್ಘಾಟಿಸಲಿದ್ದಾರೆ , ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಹರಿಕೃಷ್ಣ ಬಂಟ್ವಾಳ್ ಅಧ್ಯಕ್ಷರು , ಶ್ರೀ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ವಹಿಸಲಿದ್ದಾರೆ. ದಿವಾಕರ ದಾಸ್ ನೇರ್ಲಾಜೆ ಮಾಲಕರು ಎಸ್‌ಎಲ್ ವಿ ಬುಕ್ಸ್ ಇಂಡಿಯಾ ಪ್ರೈ.ಲಿ, ಮೈಸೂರು ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದು, ಸಭಾ ಕಾರ್ಯಕ್ರಮವನ್ನು ರುಕ್ಮಯ ಗೌಡ ಎಂ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಹಾಗೂ ನಿವೃತ್ತ ಮುಖ್ಯ ಶಿಕ್ಷಕರು, ಪೊಳ್ಯ ಕಬಕ, ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜಾರಾಮ್ ಶೆಟ್ಟಿ ಕೊಲ್ಪೆಗುತ್ತು, ಉಪಾಧ್ಯಕ್ಷರು ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘ, ಪುತ್ತೂರು, ಕೆ.ಟಿ ಆನಂದ ಅಧ್ಯಕ್ಷರು ಯುವವಾಹಿಣಿ (ರಿ) ವಿಟ್ಲ ವಲಯ, ನಾರಾಯಣ ಪೂಜಾರಿ ಎಸ್ .ಕೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತ ನಿವೃತ್ತ ಮುಖ್ಯ ಶಿಕ್ಷಕರು, ಕುಂಡಡ್ಕ , ಇಸ್ಮಾಯಿಲ್ ಪಿ. ಮಾಲಕರು ಬ್ರೈಟ್ ಕಾಂಪ್ಲೆಕ್ಸ್, ಕಬಕ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!