- Advertisement -
- Advertisement -



ವಿಟ್ಲ: ಉಕ್ಕುಡ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ಸೌಪರ್ಣಿಕಾ ಕ್ರಷರ್ ನಲ್ಲಿ ಹೊಂಡಕ್ಕೆ ಬಿದ್ದು ಮೂರು ಕಾಡುಕೋಣಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಮೂರು ಕಾಡು ಕೋಣಗಳು ಸೌಪರ್ಣಿಕಾ ಕ್ರಷರ್ ನಲ್ಲಿ ಪ್ರತ್ಯಕ್ಷವಾಗಿ ಮರಣಬಾವಿಯಂತಿದ್ದ ದೊಡ್ಡ ಹೊಂಡಕ್ಕೆ ಕಾಡುಕೋಣಗಳು ಬಿದ್ದು ಸಾವನ್ನಪ್ಪಿದೆ.





ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ವೆಟರ್ನರಿ ಡಾಕ್ಟರ್ ಗಳ ತಂಡ ಭೇಟಿ ನೀಡಿದೆ. ಇನ್ನು ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲಿಸಿದಾಗ ಕಾಡು ಕೋಣಗಳು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಕಾಡುಕೋಣಗಳ ಮರಣೋತ್ತರ ಪರೀಕ್ಷೆಯು ನಡೆಯಲಿದೆ ಹಾಗೂ ಘಟನೆ ನಡೆದ ಸ್ಥಳದ ಸೌಪರ್ಣಿಕಾ ಕ್ರಷರ್ ನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
- Advertisement -








