Sunday, September 27, 2026
spot_imgspot_img
spot_imgspot_img

ಆರೋಗ್ಯಕ್ಕೆ ಹಾನಿಕರ ಉತ್ಪನ್ನ ಪ್ರಚಾರ ಮಾಡಬೇಡಿ; ಸಿನಿ ತಾರೆಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ

- Advertisement -
- Advertisement -

ಗುಜರಾತ್‌ನ ಏಕತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಿದ್ದ ವೇಳೆ ಆರೋಗ್ಯಕ್ಕೆ ಹಾನಿಕರವಾದ ಉತ್ಪನ್ನಗಳನ್ನು ಪ್ರಚಾರ ಮಾಡದಂತೆ ಸಿನಿಮಾ ತಾರೆಗಳು ಹಾಗೂ ಸೆಲೆಬ್ರಿಟಿಗಳಿಗೆ ಕರೆ ನೀಡಿದ್ದಾರೆ.

ದೇಶದ ಯುವಜನರ ಮೇಲೆ ಸೆಲೆಬ್ರಿಟಿಗಳು ಬೀರುವ ಪ್ರಭಾವವನ್ನು ಒತ್ತಿ ಹೇಳಿದ ಅವರು, ತಮ್ಮ ಮಾತು ಮತ್ತು ಕೃತಿಗಳ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುವ ಸಾಮರ್ಥ್ಯ ಚಿತ್ರನಟ-ನಟಿಯರಿಗಿದೆ ಎಂದು ಹೇಳಿದರು.

ಯಶಸ್ವಿ ಕಲಾವಿದರು ಶಿಸ್ತುಬದ್ಧ ಜೀವನಶೈಲಿಯ ಪ್ರಯೋಜನಗಳ ಕುರಿತು ಮಾತನಾಡಿದಾಗ, ಲಕ್ಷಾಂತರ ಮಕ್ಕಳು ಮತ್ತು ಯುವಜನರು ಅವರನ್ನು ಅನುಸರಿಸುತ್ತಾರೆ. ಜನರ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಉತ್ಪನ್ನಗಳನ್ನು ಜನಪ್ರಿಯ ಕಲಾವಿದರು ಪ್ರಚಾರ ಮಾಡಬಾರದು. ಕತ್ತಲೆಯನ್ನು ಹರಡುವವನಲ್ಲ, ಬೆಳಕನ್ನು ಪಸರಿಸುವವನೇ ನಿಜವಾದ ತಾರೆ ಎಂದು ಸಿನಿಮಾ ನಟ-ನಟಿಯರಿಗೆ ಮನವಿ ಮಾಡಿಕೊಂಡರು.

ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಪಾನ್ ಮಸಾಲಾ ಜಾಹೀರಾತು ಪ್ರಚಾರ ಮಾಡಿ ಸಂಕಷ್ಟ ಎದುರಿಸಿದ್ದಾರೆ. ಅವರಿಗೆ ನೋಟಿಸ್ ಕೂಡ ಬಂದಿದೆ. ಈ ಬೆಳವಣಿಗೆ ಮಧ್ಯೆಯೇ ದ್ರೌಪದಿ ಮುರ್ಮು ಅವರು ಈ ರೀತಿಯ ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಪ್ರಶಸ್ತಿ ತೀರ್ಪುಗಾರರ ಸಮಿತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ರಾಷ್ಟ್ರಪತಿ ಆಶಿಸಿದರು. ಗುಜರಾತ್‌ನ ಏಕತಾ ನಗರದಲ್ಲಿರುವ ‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಆವರಣದಲ್ಲಿ ಈ ವೈಭವದ ಸಮಾರಂಭ ನಡೆಯಿತು. ದೆಹಲಿಯಿಂದ ಹೊರಗೆ ಈ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ ಆಯೋಜನೆಗೊಂಡಿದ್ದು, ಇದೇ ಮೊದಲ ಬಾರಿಯಾಗಿದೆ. ಸಿನಿರಂಗದ ಕಾರ್ಮಿಕರ ಸಾಮಾಜಿಕ ಭದ್ರತೆಗೂ ರಾಷ್ಟ್ರಪತಿಗಳು ಒತ್ತು ನೀಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!