Tuesday, September 29, 2026
spot_imgspot_img
spot_imgspot_img

ನ್ಯಾಯಾಲಯದ ಪ್ರಕ್ರಿಯೆ ಕುರಿತು ಸುಳ್ಳು ಮಾಹಿತಿ ಆರೋಪ: ಬಿಸಿರೋಡ್ ಚಲೋ; ಹಿಂದೂ ಸಂಘಟನೆಯ ವಕೀಲರಾದ ಪ್ರಸಾದ್ ವಿರುದ್ದ ದೂರು ದಾಖಲು

- Advertisement -
- Advertisement -

ಬಂಟ್ವಾಳ: ನ್ಯಾಯಾಲಯದ ಪ್ರಕ್ರಿಯೆ ಹಾಗೂ ಪ್ರಕರಣವೊಂದರ ತನಿಖೆಯ ಕುರಿತು ಸುಳ್ಳು ಮಾಹಿತಿ ನೀಡಿ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿ ವಕೀಲ ಪ್ರಸಾದ್ ಎಂಬವರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ಬಡಗಬೆಳ್ಳೂರು ನಿವಾಸಿ ಹನೀಫ್ @ ಮಹಮ್ಮದ್ ಹನೀಫ್ (43) ನೀಡಿದ ದೂರಿನಂತೆ, ಸೆ.28ರಂದು ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಿ.ಸಿ.ರೋಡ್‌ನಲ್ಲಿ ಧಾರ್ಮಿಕ ಸಂಘಟನೆಯೊಂದರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ವಕೀಲ ಪ್ರಸಾದ್ ಭಾಷಣ ಮಾಡಿದ್ದರು.ಈ ವೇಳೆ ಅವರು ನ್ಯಾಯಾಲಯದ ಪ್ರಕ್ರಿಯೆ ಹಾಗೂ ಪ್ರಕರಣವೊಂದರ ತನಿಖೆಗೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಮತ್ತು ಹೇಳಿಕೆಗಳನ್ನು ನೀಡಿ ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ದೂರರ್ಜಿ ದಾಖಲಾಗಿದ್ದು, ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!