ವಿಟ್ಲ: ಪೆರುವಾಯಿ ಬದ್ರಿಯಾ ಜುಮಾ ಮಸೀದಿಯ ಜನರಲ್ ಬಾಡಿ ಮಹಾಸಭೆಯು ಸಯ್ಯಿದ್ ಮುಹಮ್ಮದ್ ಹಬೀಬುಲ್ಲಾ ತಂಙಳ್ ಪೆರುವಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಸೀದಿಯ ನೂತನ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಮುಹಮ್ಮದ್ ಹಾಜಿ ದರ್ಖಾಸ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ದರಕಾಸ್ ಪೆರುವಾಯಿ ಆಯ್ಕೆಯಾದರು. ಕೋಶಾಧಿಕಾರಿಯಾಗಿ ಯೂಸಫ್ ವಳಗೆರೆ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಸಯ್ಯಿದ್ ಹಬೀಬುಲ್ಲಾ ತಂಙಳ್ ಪೆರುವಾಯಿ, ಉಪಾಧ್ಯಕ್ಷರಾಗಿ ಹಮೀದ್ ಹಾಜಿ ಕಾನ ಹಾಗೂ ಉಂಬುಚ್ಚ ಅಡ್ಕ, ಕಾರ್ಯದರ್ಶಿಗಳಾಗಿ ಅನ್ಸಾರ್ ಕಂಬಳಕೋಡಿ ಮತ್ತು ಎ.ಪಿ. ಮಹಮ್ಮದ್ ಹಾರಿಸ್ ಹಿಮಮಿ ಪೆರುವಾಯಿ ಆಯ್ಕೆಯಾದರು.
ಮದರಸ ಉಸ್ತುವಾರಿಯಾಗಿ ಹಮೀದ್ ಹಾಜಿ ದರ್ಖಾಸ್ ಹಾಗೂ ದರ್ಸ್ ಉಸ್ತುವಾರಿಯಾಗಿ ಇಬ್ರಾಹಿಂ ಆದೂರ್ ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಅಬೂಬಕ್ಕರ್ ಸುನ್ನೀ ಫೈಝಿ, ರಝಾಕ್ ಮದನಿ, ಇಬ್ರಾಹಿಂ ಮುಸ್ಲಿಯಾರ್ ಹಾಗೂ ಕನಿಯಾಲ ದಫ್ ಉಸ್ತಾದ್ ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.







