Sunday, October 4, 2026
spot_imgspot_img
spot_imgspot_img

ಎರಡು ಕಾರುಗಳ ನಡುವೆ ಭೀಕರ ಅಪಘಾತ – 9 ಮಂದಿಗೆ ಗಂಭೀರ ಗಾಯ

- Advertisement -
- Advertisement -

ಚಾಮರಾಜನಗರ: ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ 9 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹನೂರು ಪಟ್ಟಣದ ಹೊರವಲಯದಲ್ಲಿರುವ ಮಹದೇಶ್ವರ ಐಟಿಐ ಕಾಲೇಜಿನ ಬಳಿ ನಡೆದಿದೆ.

ಸುವರ್ಣ, ಲೋಕೇಶ್, ಶ್ರೇಯಾ, ರುಕ್ಮಿಣಿ ಮಂಜೇಶ್, ಭಾಗ್ಯಮ್ಮ, ಮಹಾದೇವ, ಮನ್ಸೂರ್, ಮಹಮ್ಮದ್ ದೊಫಿ, ನಿಜಾವುದ್ದಿನ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಏಳು ಮಂದಿಗೆ ತೀವ್ರ ಗಾಯಗಳಾಗಿದ್ದು, ಕೈಕಾಲು ಮುರಿದಿವೆ ಎಂದು ತಿಳಿದು ಬಂದಿದೆ. ಒಂದು ಕಾರಿನಲ್ಲಿದ್ದವರು ಮಲೆ ಮಹದೇಶ್ವರಕ್ಕೆ ತೆರಳುತ್ತಿದ್ದರು. ಇನ್ನೊಂದು ಕಾರಿನಲ್ಲಿದ್ದವರು ಕೊಳ್ಳೇಗಾಲದತ್ತ ತೆರಳುತ್ತಿದ್ದರು ಎನ್ನಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹನೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!