Friday, April 19, 2024
spot_imgspot_img
spot_imgspot_img

24 ಗಂಟೆಗಳಲ್ಲಿ ಭಾರತದಲ್ಲಿ 3,23,144 ಕೋವಿಡ್ ಕೇಸ್ ಪತ್ತೆ!

- Advertisement -G L Acharya panikkar
- Advertisement -

ನವದೆಹಲಿ: ದೇಶಾದ್ಯಂತ ಕೋವಿಡ್ ತನ್ನ ಭದ್ರ ಬಾಹುಗಳನ್ನು ಚಾಚುತ್ತಿದೆ. ದಿನೇ ದಿನೇ ಮರಣ ಮೃದಂಗವನ್ನು ಭಾರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಇಡೀ ಭಾರತದಲ್ಲಿ 3,23,144 ಕೋವಿಡ್ ಕೇಸುಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟಾರೆ ದೇಶದ ಕೋವಿಡ್ ಸಕ್ರೀಯ ಪ್ರಕರಣಗಳ ಸಂಖ್ಯೆ 28,82,204ಕ್ಕೆ ಏರಿಕೆಯಾಗಿದೆ.

ಮತ್ತೊಂದು ಆಘಾತಕಾರಿ ವಿಚಾರ ಏನಂದರೆ ಕಳೆದ ಒಂದು ದಿನಕ್ಕೆ 2771 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿನಿಂದ ಸತ್ತರವರ ಸಂಖ್ಯೆ 1,97,894ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 2,51,827 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ 1,45,56,209 ಮಂದಿ ಸೋಂಕಿನಿಂದ ಗುಣಮುಖರಾದಂತಾಗಿದೆ.

ರಾಜ್ಯದಲ್ಲಿ ಭಾನುವಾರಕ್ಕೆ (34804) ಹೋಲಿಸಿದರೆ ಸೋಮವಾರ ರಾಜ್ಯದಲ್ಲಿ ಪತ್ತೆಯಾಗಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 29744 ಹೊಸ ಪ್ರಕರಣಗಳು ಪತ್ತೆಯಾಗಿವೆ.

- Advertisement -

Related news

error: Content is protected !!