

ಹಿರಿಯ ನಟ ನಾನಾ ಪಾಟೇಕರ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎನ್ನಲಾದ ನಂತರ ಈಗ ಸಾವು ಸಹಜ ಅಲ್ಲ ಎನ್ನುವ ಅನುಮಾನಗಳು ಶುರುವಾಗಿದೆ ಎನ್ನಲಾಗಿದೆ. ಸಾವಿನ ನಂತರ ಪಣಜಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಸೆಕ್ಷನ್ 194 ರ ಅಡಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣವನ್ನು ದಾಖಲಿಸಿದ್ದಾರೆ.
ನಾನಾ ಸಾವಿನ ತನಿಖೆಗೆ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಪೊಲೀಸ್ ದಾಖಲೆಯ ಪ್ರಕಾರ, ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಪಾಟೇಕರ್ ಅವರನ್ನು ಡೋನಾ ಪೌಲಾದ ಓಷನ್ ಪಾರ್ಕ್‌ನಲ್ಲಿರುವ ಅವರ ನಿವಾಸದಿಂದ ಬಂಬೋಲಿಮ್‌ನ ಮಣಿಪಾಲ್ ಆಸ್ಪತ್ರೆಯ ಅಪಘಾತ ವಾರ್ಡ್‌ಗೆ ತರುವಾಗ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ಪ್ರಸ್ತುತ ಪಿಎಸ್‌ಐ ನಿತಿನ್ ನಾಯಕ್ ನೇತೃತ್ವದಲ್ಲಿ ಪ್ರಗತಿಯಲ್ಲಿದೆ ಎಂದು ಎಎನ್‌ಐ ವರದಿ ಮಾಡಿದೆ.
ನಾನಾ ಸಾವಿನ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸುವುದು ಸಾಮಾನ್ಯ ವಿಷಯ. ಏಕೆಂದರೆ ಅವರು ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ಸಾವನ್ನಪ್ಪಿದರು. ಆಸ್ಪತ್ರೆಗೆ ತರುವಾಗ ಮೃತಪಟ್ಟಿದ್ದರು. ಯಾವುದೇ ಕ್ರೈಂ ನಡೆಯದಂತೆ ಪೊಲೀಸರು ಅಂತಹ ವಿಷಯಗಳಲ್ಲಿ ಅಸ್ವಾಭಾವಿಕ ಸಾವು ಪ್ರಕರಣವನ್ನು ದಾಖಲಿಸುತ್ತಾರೆ. ಈ ಸಂದರ್ಭದಲ್ಲಿ, ಆಸ್ಪತ್ರೆಯು ಪೊಲೀಸರಿಗೆ ವರದಿ ಸಲ್ಲಿಸಿದ ನಂತರ ಇದನ್ನು ಮಾಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ನಾನಾ ಪಾಟೇಕರ್ ಅವರು ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುಲಾಯಿತಾದರೂ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು ಎಂದು ತಿಳಿದು ಬಂದಿದೆ. ಮಣಿಪಾಲ್ ಆಸ್ಪತ್ರೆಯ ಡಾ. ಶೇಖರ್ ಅವರು ನಾನಾ ಪಾಟೇಕರ್ ಸಾವಿನ ಕುರಿತ ಕೆಲವು ಸಂಗತಿ ರಿವೀಲ್ ಮಾಡಿದ್ದಾರೆ.
ನಾನಾ ಪಾಟೇಕರ್ ಅವರನ್ನು 4.30ರ ವೇಳೆ ಮೃತಪಟ್ಟ ಸ್ಥಿತಿಯಲ್ಲಿ ಕರೆತರಲಾಗಿದೆ. ನಾವು 45ನಿಮಿಷದಿಂದ 1 ಗಂಟೆಯ ತನಕ ಅವರನ್ನು ಉಳಿಸಲು ಪ್ರಯತ್ನಿಸಿದ್ದೇವೆ. ಕಾರ್ಡಿಯಾಕ್ ಮಸಾಜ್ ನೀಡಲಾಗಿದೆ. ಆದರೆ ಅವರನ್ನು ಉಳಿಸಲಾಗಲಿಲ್ಲ. ಹಾಗಾಗಿ ನಾವು ಮೆಡಿಕೋ ಲೀಗಲ್ ಕೇಸ್ ದಾಖಲಿಸಬೇಕಾಯ್ತು ಎಂದು ಅವರು ಹೇಳಿದ್ದಾರೆ.
ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆ ಅ.09 ರ ರಾತ್ರಿ ಪುಣೆಯ ಹೊರವಲಯದ ಡೋಂಜೆ ಗ್ರಾಮದಲ್ಲಿರುವ ಅವರ ಫಾರ್ಮ್ ಹೌಸ್ ಆವರಣದಲ್ಲಿ ಸಂಪೂರ್ಣ ಸರ್ಕಾರಿ ಗೌರವದೊಂದಿಗೆ ನಡೆದಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








