Monday, October 26, 2026
spot_imgspot_img
spot_imgspot_img

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದಕ್ಕಾಗಿ ಅಮೆಝಾನ್ನ 46 ಲಕ್ಷ ರೂ. ವೇತನ ತ್ಯಜಿಸಿದ ಯುವಕ

- Advertisement -
- Advertisement -

ಲಕ್ನೋ: ಅಮೆಜಾನ್ ಸಂಸ್ಥೆಯಲ್ಲಿ ವಾರ್ಷಿಕ 46 ಲಕ್ಷ ರೂಪಾಯಿ ವೇತನದ ಕ್ಲೌಡ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಾರ್ದೇಂದು ತಿವಾರಿ (27) ಎಂಬ ಯುವಕ, ಭಾರತೀಯ ಸೇನೆ ಸೇರುವ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಳ್ಳಲು ಕಾರ್ಪೊರೇಟ್ ವೃತ್ತಿಜೀವನವನ್ನು ತೊರೆದಿದ್ದಾರೆ.

ಶಾರ್ದೇಂದು ತಿವಾರಿ ಅವರು ಲಕ್ನೋ ಮೂಲದವರು ಅವರ ತಂದೆ ಕ್ಯಾಪ್ಟನ್ ರಾಜ್ ಕುಮಾರ್ ತಿವಾರಿ 36 ವರ್ಷಗಳ ಕಾಲ ಆರ್ಮಿ ಸರ್ವಿಸ್ ಕೋರ್‌ನಲ್ಲಿ ಸೇವೆ ಸಲ್ಲಿಸಿರುತ್ತಾರೆ. ಶಾರ್ದೇಂದು ತಿವಾರಿ ಅವರು ಕೇಂದ್ರೀಯ ವಿದ್ಯಾಲಯ ಮತ್ತು ಪಿಇಸಿ ಚಂಡೀಗಢದ ಹಳೆ ವಿದ್ಯಾರ್ಥಿಯಾಗಿದ್ದಾರೆ.

ಶಾರ್ದೇಂದು ತಿವಾರಿ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನವನ್ನು ಕಟ್ಟಿಕೊಂಡಿದ್ದರು. ಅವರು ಖ್ಯಾತ ಏರೋಸ್ಪೇಸ್ ಸಂಸ್ಥೆ ‘ಏರ್‌ಬಸ್’ಗೂ ಆಯ್ಕೆಯಾಗಿದ್ದರು. ಭಾರತೀಯ ಸೇನೆಗೆ ಸೇರುವ ನಿರ್ಧಾರಕ್ಕೆ ಬರಲು ಅವರ ಅವರ ತಂದೆಯೇ ಸ್ಫೂರ್ತಿ.

ಸೇನೆಗೆ ಸೇರ್ಪಡೆಯಾಗಲು ಆರಂಭಿಕ ಪ್ರಯತ್ನಗಳಲ್ಲಿ ಹಲವು ಬಾರಿ ಹಿನ್ನಡೆ ಅನುಭವಿಸಿದರೂ, ಶಾರ್ದೇಂದು ತಿವಾರಿ ಅವರು ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ. ಗಯಾದ ಒಟಿಎನಲ್ಲಿ ನಡೆದ ಕಠಿಣ ಮಿಲಿಟರಿ ತರಬೇತಿಯ ಅವಧಿಯಲ್ಲಿ, ತಿವಾರಿ ಅವರ ದೃಢಸಂಕಲ್ಪ ಮತ್ತು ನಾಯಕತ್ವದ ಗುಣಗಳನ್ನು ಗುರುತಿಸಿ ಅವರಿಗೆ ಪ್ರತಿಷ್ಠಿತ ‘ಹಿರಿಯ ಅಂಡರ್ ಆಫೀಸರ್’ ಹುದ್ದೆಯನ್ನು ನೀಡಲಾಗಿತ್ತು.

ಶಾರ್ದೇಂದು ತಿವಾರಿ ಅವರು ಇತ್ತೀಚೆಗೆ ಗಯಾದ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ (ಒಟಿಎ) ಅಧಿಕಾರಿಯಾಗಿ ಪದವಿ ಪಡೆದು ಸೇನೆಗೆ ಸೇರ್ಪಡೆಯಾಗಿದ್ದಾರೆ.

- Advertisement -

Related news

error: Content is protected !!