Tuesday, September 22, 2026
spot_imgspot_img
spot_imgspot_img

ಮಂಗಳೂರು: ಸಸಿಹಿತ್ಲು ಬೀಚ್​ನಲ್ಲಿ‌ ಇಬ್ಬರು ನೀರು ಪಾಲು- ಓರ್ವನ ಮೃತದೇಹ ಪತ್ತೆ

- Advertisement -
- Advertisement -

ಮಂಗಳೂರು: ಮಂಗಳೂರು ನಗರದ ಸಸಿಹಿತ್ಲು ಮುಂಡ ಬೀಚ್​ಗೆ ಬಂದಿದ್ದ 9 ಮಂದಿಯಲ್ಲಿ ಇಬ್ಬರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನೀರು ಪಾಲಾದ ಘಟನೆ ರವಿವಾರ ನಡೆದಿದೆ. ಇವರಲ್ಲಿ ಓರ್ವನ ಮೃತದೇಹ ಪತ್ತೆಯಾಗಿದೆ.

ಕಾರ್ಕಳದ ಸಾಣೂರು ಮೂಲದ ಸುಂದರ ಶೆಟ್ಟಿ (45) ಮೃತಪಟ್ಟವರು. ದಾಮೋದರ ಎಂಬವರು ಇನ್ನೂ ಪತ್ತೆಯಾಗಿಲ್ಲ. ನಗರದ ಹಳೆಯಂಗಡಿ ಬಳಿಯ ತೋಕೂರಿನ ಮೂಡುಮನೆಗೆ ವಿವಾಹ ಕಾರ್ಯ ನಿಮಿತ್ತ ಶುಕ್ರವಾರ ನಗರಕ್ಕೆ ಆಗಮಿಸಿದ್ದರು. ಸಂಜೆ ವಿಹಾರಕ್ಕಾಗಿ 11 ಮಂದಿ ಸಸಿಹಿತ್ಲು ಬೀಚ್‌ಗೆ ಬಂದಿದ್ದರು.

ಇವರಲ್ಲಿ 9 ಮಂದಿ ನೀರಿಗಿಳಿದಿದ್ದರು. ಇದರಲ್ಲಿ ಮಹಿಳೆಯೋರ್ವರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ಅವರನ್ನು ರಕ್ಷಿಸಲು ಮೃತ ಸುಂದರ ಶೆಟ್ಟಿ ಸಹಿತ ಇತರರು ಮುಂದಾಗಿದ್ದರು. ಅಲೆಗಳ ಅಬ್ಬರಕ್ಕೆ ಎಲ್ಲರೂ ನೀರಿನ ಸೆಳೆತಕ್ಕೊಳಗಾಗಿದ್ದರು. ತಕ್ಷಣ ಸ್ಥಳೀಯ ಮೀನುಗಾರರು ರಕ್ಷಣೆಗೆ ಮುಂದಾಗಿ 7 ಮಂದಿಯನ್ನು ರಕ್ಷಿಸಿದ್ದಾಗಿ ಸ್ಥಳೀಯ ಮೀನುಗಾರರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!