


ಪುತ್ತೂರು: ರಾಜಕೀಯದಲ್ಲಿ ಸಂಸ್ಕೃತಿ ಸಂಸ್ಕಾರ ಮುಖ್ಯವಾಗಿದ್ದು, ಪಕ್ಷ ಯಾವುದೇ ಇರಲಿ ಅಭಿವೃದ್ಧಿಯೇ ಮೊದಲ ಆದ್ಯತೆಯಾಗಬೇಕು ಎಂದು ಪುತ್ತೂರು ಬಿಜೆಪಿ ವ್ಯಾಪಾರ ಪ್ರಕೋಷ್ಠದ ಸಂಚಾಲಕ ಉಜ್ವಲ್ ಪ್ರಭು ಹೇಳಿದ್ದಾರೆ.
ಪುತ್ತೂರಿನಲ್ಲಿ ಇದಕ್ಕೆ ತದ್ವಿರುದ್ಧವಾಗಿ ಶಾಸಕರು ತಮ್ಮದೇ ಜಿಲ್ಲೆಯ ವಿರೋಧ ಪಕ್ಷದ ಅಧ್ಯಕ್ಷರನ್ನು ಏಕವಚನದಲ್ಲಿ ನಿಂದಿಸುತ್ತಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.
ಏಕವಚನ ಬಳಸಿ ನಿಂದಿಸುವುದು ಅವರ ಸಂಸ್ಕೃತಿ ಮತ್ತು ಯೋಗ್ಯತೆಯನ್ನು ತೋರಿಸುತ್ತದೆ. ಏಕವಚನ ಬಳಸುವುದು ನಮಗೂ ಗೊತ್ತು, ಆದರೆ ನಮಗೆ ಸಂಸ್ಕಾರವಿದೆ. ನಮಗೆ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಎಲ್ಲಾ ಕಡೆ ತೆಂಗಿನಕಾಯಿ ಒಡೆಯುವುದು ಬಿಟ್ಟರೆ ಕೆಲಸ ಆರಂಭವಾಗಿದ್ದು ಇಲ್ಲಿಯವರೆಗೂ ಕಂಡುಬಂದಿಲ್ಲ. ಇದು ಚುನಾವಣಾ ಗಿಮಿಕ್ನಂತೆ ಕಾಣುತ್ತಿದ್ದು, ಇದನ್ನೆಲ್ಲಾ ನೋಡುವಾಗ ಪುತ್ತೂರಿನಲ್ಲಿ ಛದ್ಮವೇಷ ನಡೆದಂತೆ ಭಾಸವಾಗುತ್ತದೆ ಮತ್ತು ಇದೆಲ್ಲವನ್ನು ಪುತ್ತೂರಿನ ಜನತೆ ಗಮನಿಸುತ್ತಿದ್ದಾರೆ. ಹಾಗಾಗಿ ಶಾಸಕರು ಮಾತು ಕಡಿಮೆ ಮಾಡಿ ಅಭಿವೃದ್ಧಿಗೆ ಒತ್ತು ನೀಡಬೇಕು ಹಾಗೂ ಇನ್ನಾದರೂ ಸುಸಂಸ್ಕೃತವಾಗಿ ನಡೆದುಕೊಳ್ಳಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದು ಉಜ್ವಲ್ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








