Wednesday, October 28, 2026
spot_imgspot_img
spot_imgspot_img

ಮಂಗಳೂರಿನಲ್ಲಿ ಮಾಂಸ ಸಾಗಾಟದ ಪಿಕಪ್ ಬೆನ್ನಟ್ಟಿದ ದುಷ್ಕರ್ಮಿಗಳು: ಕಾನೂನು ಕ್ರಮಕ್ಕೆ ದೂರು

- Advertisement -
- Advertisement -

ಮಂಗಳೂರು: ಕಾನೂನು ಬದ್ಧವಾಗಿ ಮಾಂಸ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ತಡೆದು ಅವಾಚ್ಯ ಶಬ್ದದಿಂದ ಬೈದು, ಕೊಲೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಐದಾರು ಮಂದಿಯ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.J ಜೋಕಟ್ಟೆ ನಿವಾಸಿ ಮುಹಮ್ಮದ್ ಹನೀಫ್ ಗುಡ್ಡೆಮನೆ ಎಂಬವರ ಮಾಲಿಕತ್ವದ ಪಿಕಪ್ ವಾಹನದಲ್ಲಿ ತಾನು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದೇನೆ. ಅ.25ರಂದು ಮುಂಜಾವ 1 ಗಂಟೆಗೆ ಮುಹಮ್ಮದ್ ಹನೀಫ್‌ರ ಸೂಚನೆ ಮೇರೆಗೆ ಎತ್ತು ಮತ್ತು ಎಮ್ಮೆಯ ಮಾಂಸವನ್ನು ಖರೀದಿಸಿ ತರಲು ಉಪ್ಪಳದ ಬಂದ್ಯೋಡಿಗೆ ಕಲಂದ‌ರ್ ಶಾಫಿಯ ಜೊತೆ ಹೋಗಿದ್ದೆ. ಹಾಗೇ ಅ.25ರಂದು ಮುಂಜಾನೆ 5 ಗಂಟೆಗೆ ಮುಹಮ್ಮದ್ ಕುಂಞ ಎಂಬವರಿಂದ 327 ಕೆಜಿ ಎಮ್ಮೆ ಮತ್ತು ಎತ್ತಿನ ತುಂಡರಿಸಿದ ಮಾಂಸವನ್ನು ಖರೀದಿಸಿ ಪಿಕಪ್‌ನಲ್ಲಿ ತುಂಬಿಸಿ ಬಿಲ್ ಸಮೇತ ಬೆಳಗ್ಗೆ 5:40ಕ್ಕೆ ತಲಪಾಡಿ ಟೋಲ್ ಗೇಟ್ ಬಳಿ ತಲುಪಿದಾಗ ಕಾರೊಂದು ತಾನು ಚಲಾಯಿಸುತ್ತಿದ್ದ ಪಿಕಪ್ ವಾಹನವನ್ನು ಹಿಂಬಾಲಿಸಿಕೊಂಡು ಬಂತು.

ತಾನು ನೇತ್ರಾವತಿ ಸೇತುವೆ ದಾಟಿದ ಬಳಿಕ ಎಕ್ಕೂರು ಸಮೀಪದ ಇಂಡಿಯಾನ ಹಾಲ್ ಬಳಿ ಬಂದಾಗ ನಾಲ್ಕು ಮಂದಿ ರಸ್ತೆಯಲ್ಲಿ ನಿಂತಿದ್ದರು. ಅದರಲ್ಲಿ ಒಬ್ಬ ಕಬ್ಬಿಣದ ರಾಡ್ ಹಿಡಿದಿದ್ದು ಅಲ್ಲೇ ಇದ್ದ ಬ್ಯಾರಿಕೇಡ್‌ಗಳನ್ನು ಅಡ್ಡ ಹಾಕಿ ಪಿಕಪ್ ತಡೆದು ನಿಲ್ಲಿಸಲು ಪ್ರಯತ್ನಿಸಿದ. ಅಲ್ಲಿಂದ ತಾನು ತಪ್ಪಿಸಿಕೊಂಡು ನಂತೂರು ಕಡೆಗೆ ಪಿಕಪ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅವಾಚ್ಯ ಶಬ್ದದಿಂದ ಬೈದು ಪಿಕಪ್ ನಿಲ್ಲಿಸಲು ಎರಡು ಕಾರುಗಳಲ್ಲಿದ್ದ ವ್ಯಕ್ತಿಗಳು ಹೇಳುತ್ತಿದ್ದನ್ನು ಕೇಳಿಸಿಕೊಂಡೆ. ಆ ಪೈಕಿ ಒಂದು ಕಾರು ತನ್ನ ಪಿಕಪನ್ನು ಓವರ್‌ಟೇಕ್ ಮಾಡಿಕೊಂಡು ಕೆಪಿಟಿ ಜಂಕ್ಷನ್ ಬಳಿ ನಿಂತಿತು. ಅಲ್ಲದೆ ಇಂಡಿಯಾನ ಹಾಲ್ ಬಳಿ ಇದ್ದ ವ್ಯಕ್ತಿಗಳೇ ಕೆಪಿಟಿ ಜಂಕ್ಷನ್‌ನಲ್ಲಿ ಕದ್ರಿ ಠಾಣೆ ಕಡೆಯಿಂದ ಬೊಂದೆಲ್ ಕಡೆಗೆ ಹೋಗಬೇಕಾಗಿದ್ದ ಯಾವುದೋ ಬಸ್ಸನ್ನು ಕೂಳೂರು ಕಡೆಗೆ ಹೋಗುವ ರಸ್ತೆಗೆ ಅಡ್ಡ ನಿಲ್ಲಿಸಿದ್ದರು. ಜೀವಭಯದಿಂದ ತಾನು ಕೆಪಿಟಿ ಜಂಕ್ಷನ್‌ನಿಂದ ಕಾವೂರು ಕಡೆಗೆ ಹೋಗುವ ರಸ್ತೆಯ ಮೂಲಕ ವಾಹನವನ್ನು ಚಲಾಯಿಸಿಕೊಂಡು ಹೋದಾಗ ಬೆಳಗ್ಗೆ 6:10ಕ್ಕೆ ಮೆಸ್ಕಾಂ ಪವರ್ ಗ್ರಿಡ್‌ನ ಎದುರು ಇರುವ ಪೆಟ್ರೋಲ್ ಪಂಪ್ ಬಳಿ ಕಾರಲ್ಲಿ ಬಂದವರು ಪಿಕಪ್ ವಾಹನವನ್ನು ಮತ್ತೆ ತಡೆದು ನಿಲ್ಲಿಸಲು ಪ್ರಯತ್ನಿಸಿದರು.

ಅಲ್ಲಿಂದ ಹೇಗೋ ತಪ್ಪಿಸಿಕೊಂಡು ತಾನು ಜೋಕಟ್ಟೆ ತಲುಪಿದೆ. ಹೀಗೆ ಎರಡು ಕಾರುಗಳಲ್ಲಿ ಬಂದ ಸುಮಾರು 5 ರಿಂದ 6 ಮಂದಿ ತಾನು ಚಲಾಯಿಸುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಹಮ್ಮದ್ ಅಫ್ರೀದ್ ದೂರು ನೀಡಿದ್ದಾರೆ. ಅದರಂತೆ ಕಾವೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!