Wednesday, October 28, 2026
spot_imgspot_img
spot_imgspot_img

ಸ್ಪೇನ್‌ನ ಎರಡು ಅತಿವೇಗದ ರೈಲುಗಳು ಮುಖಾಮುಖಿ ಡಿಕ್ಕಿ – 46 ಮಂದಿ ಮೃತ್ಯು..!

- Advertisement -
- Advertisement -

ಮ್ಯಾಡ್ರಿಡ್: ಸ್ಪೇನ್‌ನ ಕೇಂದ್ರ ಭಾಗದ ಟೊಲೆಡೊ ಪ್ರಾಂತ್ಯದಲ್ಲಿ ಎರಡು ಅತಿವೇಗದ ರೈಲುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಪರಿಣಾಮ 46 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು(ಅ.28) ಬೆಳಿಗ್ಗೆ ನಡೆದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ವರದಿಗಳ ಪ್ರಕಾರ, ಒಂದೇ ದಿಕ್ಕಿನಲ್ಲಿ ಪ್ರಯಾಣಿಸುತ್ತಿದ್ದ ಎರಡು ಅತಿವೇಗದ ರೈಲುಗಳ ನಡುವೆ ಈ ಅಪಘಾತ ಸಂಭವಿಸಿದೆ. ಒಂದು ರೈಲು ಮತ್ತೊಂದು ರೈಲಿನ ಹಿಂದಿನ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಎರಡು ಬೋಗಿಗಳು ಹಳಿ ತಪ್ಪಿವೆ. ಪರಿಣಾಮ 46 ಮಂದಿ ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎರಡು ರೈಲುಗಳ ನಡುವೆ ಅಪಘಾತ ಸಂಭವಿಸಲು ನಿಖರ ಕಾರಣ ತಿಳಿದುಬಂದಿಲ್ಲ. ಎರಡು ರೈಲುಗಳು ಹೇಗೆ ಸಂಪರ್ಕಕ್ಕೆ ಬಂದವು ಹಾಗೂ ಅಪಘಾತದಿಂದ ಮೃತರಾದವರ ನಿಖರ ಸಂಖ್ಯೆಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಅಪಘಾತದ ಪರಿಣಾಮ ಮ್ಯಾಡ್ರಿಡ್ ಅನ್ನು ಸಿಯುಡಾಡ್ ರಿಯಲ್ ಮತ್ತು ದಕ್ಷಿಣದ ಅಂಡಲೂಸಿಯಾ ಪ್ರದೇಶದೊಂದಿಗೆ ಸಂಪರ್ಕಿಸುವ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಮಧ್ಯ ಮತ್ತು ದಕ್ಷಿಣ ಸ್ಪೇನ್‌ನಾದ್ಯಂತ ರೈಲು ಸಂಪರ್ಕಕ್ಕೆ ಅಡ್ಡಿಯಾಗಿದೆ.

ಈ ಸೇವೆಯ ಸ್ಥಗಿತವು ಸ್ಪೇನ್ ರಾಜಧಾನಿ ಮತ್ತು ದಕ್ಷಿಣದ ದೂರದ ಪ್ರದೇಶಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸೇವೆಗಳು ಪುನರಾರಂಭವಾಗುವ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

- Advertisement -

Related news

error: Content is protected !!