

ಮಾನ್ಯ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಅವರೇ ನೀವು ನಮ್ಮ ಜಿಲ್ಲಾಧ್ಯಕ್ಷರ ಬಗ್ಗೆ ಮಾತಾಡಿದ ರೀತಿಯನ್ನು ಗ್ರಾಮಾಂತರ ಮಂಡಲದ ಯುವ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ನಮ್ಮ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅವರು ಬೂತ್ ಮಟ್ಟದ ಕಾರ್ಯದರ್ಶಿಯಾಗಿ ಪಂಚಾಯತ್ ಸದಸ್ಯರಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ನಂತರ ಶಾಸಕರಾಗಲು ಟಿಕೆಟ್ ಗಿಟ್ಟಿಸಿಕೊಂಡವರು ಪಕ್ಷದ ತಲಾ ಮಟ್ಟದಲ್ಲಿ ಕೆಲಸ ಮಾಡಿ ಪಕ್ಷಕ್ಕಾಗಿ ಶ್ರಮಿಸಿದವರು ನಿಮ್ಮ ಹಾಗೆ ಗ್ರಾಮ ಪಂಚಾಯತ್ ಚುನಾವಣೆ ಬಂತೆಂದರೆ ವಿದೇಶದಲ್ಲಿ ಕೂತ ಇತಿಹಾಸ ಇಲ್ಲ.

ನಮ್ಮ ಪಕ್ಷದ ನಾಯಕರುಗಳ ಬಗ್ಗೆ ಕೀಳಾಗಿ ಮಾತನಾಡುವ ಬಗ್ಗೆ ಹೋಮ್ ವರ್ಕ್ ಮಾಡಿ ಬನ್ನಿ. ಸ್ಟ್ರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮಾನ್ಯ ಸಚಿವರಾದ ಯತೀಂದ್ರ ಸಿದ್ದರಾಮ್ಯನವರು ಮಾಡಿದ ಅಪವಾದ ಹಾಕಿದವನ್ನು ಸುಳ್ಳು ಎಂದು ನಿರೂಪಿಸಿ ಮತ್ತೆ ನಮ್ಮ ಜಿಲ್ಲಾಧ್ಯಕ್ಷರ ಬಗ್ಗೆ ಮಾತಾಡಿ. Uneducated ಎನ್ನುವ ಪದ ನಿಮ್ಮ ಅಭಿವೃದ್ಧಿ ಅಭಿವೃದ್ಧಿ ಅಂತ ಎಲ್ಲಾ ಕಡೆ ಬ್ಯಾನರ್ ಮಾತ್ರ ಬಿದ್ದದ್ದು ಮಾತ್ರ ಕಾಣುತ್ತದೆ. ಒಂದು ಕಡೆ ಕೂಡ ಕಳೆದ 4 ತಿಂಗಳಿನಿಂದ ಕೆಲಸ ಪ್ರಾರಂಭವಾಗಲೇ ಇಲ್ಲ. ನಮ್ಮ ಪುತ್ತೂರಿಗೆ ಭ್ರಷ್ಟಾಚಾರ ಶಾಸಕರು ಇಲ್ಲಿ ತನಕ ಬಂದಿಲ್ಲ. ನೀವು ಆ ದಾಖಲೆಯನ್ನು ಮುರಿಯುತ್ತೀರಿ ಅನ್ನುವ ಸಂಶಯ ಕಾಣುತ್ತದೆ. ನಿಮ್ಮ ಸುಳ್ಳಿನ ಅಭಿವೃದ್ಧಿಯನ್ನು ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ.








