Thursday, October 29, 2026
spot_imgspot_img
spot_imgspot_img

ಸುರತ್ಕಲ್ ಹೊಸಬೆಟ್ಟು ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಹಿಂದೂ ಜಾಗರಣ ವೇದಿಕೆ ಆಗ್ರಹ

- Advertisement -
- Advertisement -

ಸುರತ್ಕಲ್ : ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ದಿನಾಂಕ 27-10-2026 ರಂದು ಸ್ಥಳೀಯ ನಿವಾಸಿ ಸೋಮನಾಥ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ, ಅವರನ್ನು ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಿ, ಇಲಾಖೆಯ ಕೆಲವರಿಂದ “ಮಾನಸಿಕ ಹಿಂಸೆಗೆ ಒಳಗಾಗಿದ್ದರೂ” ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುಃಖಕರ ವಿಚಾರವಾಗಿದೆ.

ಈ ವಿಚಾರವಾಗಿ ಹಿಂದು ಜಾಗರಣ ವೇದಿಕೆಯ ಮಂಗಳೂರು ಜಿಲ್ಲಾ ಸಮಿತಿ, ಸುರತ್ಕಲ್ ನಗರ’ದ ನೇತೃತ್ವದಲ್ಲಿ ಸೋಮನಾಥ ಅವರ ಮನೆಗೆ ಭೇಟಿ ನೀಡಿ, ಅವರ ಕುಟುಂಬದವರೊಂದಿಗೆ ಚರ್ಚಿಸಿ. ಈ ಪ್ರಕರಣದ ಕುರಿತು ಕುಲಂಕುಶ ತನಿಖೆ ನಡೆಯುವಂತೆ ಹಾಗೂ ಕುಟುಂಬದವರು ಮತ್ತು ಊರಿನವರು ಕೈಗೊಳ್ಳುವ ಕಾನೂನುಬದ್ಧ ಹೋರಾಟಕ್ಕೆ ಸಂಘಟನೆಯು ಸಂಪೂರ್ಣ ಬೆಂಬಲವಾಗಿ ನಿಲ್ಲಲಿದೆ ಎಂಬ ವಿಶ್ವಾಸವನ್ನು ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ವಿಚಾರಗಳಲ್ಲಿ ಪರಿಣತಿ ಹೊಂದಿರುವವರ ಸಹಕಾರದೊಂದಿಗೆ ಸಂಘಟನೆಯು ಕಾರ್ಯನಿರ್ವಹಿಸಲಿದೆ.

ಈ ಘಟನೆಯಿಂದ ಯಾರೂ ತಮ್ಮ ನೈತಿಕ ಸ್ಥೆರ್ಯವನ್ನು ಕಳೆದುಕೊಳ್ಳಬಾರದು. ಅನೈತಿಕ ಚಟುವಟಿಕೆಗಳು ಕಂಡುಬಂದಾಗ ಅವುಗಳನ್ನು ಪ್ರಶ್ನಿಸುವ ಹಕ್ಕು ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂಬುದನ್ನು ಪ್ರಜಾಪ್ರಭುತ್ವದ ಆಶಯಗಳು ಮತ್ತು ಕಾನೂನಿನ ತತ್ವಗಳು ಪ್ರತಿಪಾದಿಸುತ್ತವೆ.

ಇದು ಕೇವಲ ಹೊಸಬೆಟ್ಟುವಿನ ಸಮಸ್ಯೆಯಲ್ಲ. ಮುಕ್ಯ ಗುಡ್ಡೆಕೊಪ್ಪ, ಇಡ್ಯ, ದೊಡ್ಡಕೊಪ್ಪಳ, ಚಿತ್ರಾಪುರ ಹಾಗೂ ಬೈಕಂಪಾಡಿ ಸಮುದ್ರತೀರದ ಪ್ರದೇಶಗಳಲ್ಲಿ ಅನೇಕ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಸ್ಥಳೀಯರಿಗೆ ತಿಳಿದಿರುವ ವಿಚಾರವಾಗಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಹೊರಗಿನಿಂದ ಬರುವ ಕೆಲವರು ನಡೆಸುತ್ತಿದ್ದಾರೆ ಎನ್ನಲಾದ ಇಂತಹ ಚಟುವಟಿಕೆಗಳ ಕುರಿತು ಸೂಕ್ತ ಪರಿಶೀಲನೆ ನಡೆಸುವ ಅಗತ್ಯವಿದೆ. ಆದ್ದರಿಂದ, ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ, ಕಾನೂನುಬದ್ಧವಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯನ್ನು ಹಿಂದು ಜಾಗರಣ ವೇದಿಕೆ ಆಗ್ರಹಿಸುತ್ತದೆ.

- Advertisement -

Related news

error: Content is protected !!