Thursday, October 29, 2026
spot_imgspot_img
spot_imgspot_img

ಪುತ್ತೂರು: ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ 6.86 ಕೋಟಿ ರೂ. ಅಕ್ರಮ ವರ್ಗಾವಣೆ: ಸಂಘದ ಕಾರ್ಯನಿರ್ವಹಣಾಧಿಕಾರಿ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು: ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ(ರಿ.) ಸುಮಾರು 6.86 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಮಾಡಿ ವಂಚನೆ ಎಸಗಿರುವ ಆರೋಪದಡಿ ಸಂಘದ ಕಾರ್ಯನಿರ್ವಹಣಾಧಿಕಾರಿ ಸೇರಿ ಇಬ್ಬರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಘದ ಅಧ್ಯಕ್ಷರು ಪದ್ಮನಾಭ ಭಟ್ ಅವರು ನೀಡಿದ ದೂರಿನಂತೆ ಸಂಘವು ಸಾರ್ವಜನಿಕರಿಂದ ವಿವಿಧ ಠೇವಣಿಗಳ ರೂಪದಲ್ಲಿ 31,21,84,821 ರೂ. ಸಂಗ್ರಹಿಸಿದೆ. ಸಂಘದ 12 ಜನರ ಆಡಳಿತ ಮಂಡಳಿಯು 2025-26ನೇ ಸಾಲಿನ ವ್ಯವಹಾರ ಪರಿಶೀಲಿಸಿದ ವೇಳೆ ಸುಮಾರು 6,86,00,000 ರೂ. ಕಾನೂನುಬಾಹಿರವಾಗಿ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.

ಪರಿಶೀಲನೆ ನಡೆಸಿದಾಗ ಯಾವುದೇ ಕಾನೂನಾತ್ಮಕ ದಾಖಲೆಗಳಿಲ್ಲದೆ ಸಮೀರಾ ರಿಯಾಜ್ ಎಂಬುವವರ ಖಾತೆಗೆ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಈ ವ್ಯವಹಾರವನ್ನು CoBank ಸಾಫ್ಟ್‌ವೇರ್‌ನಲ್ಲಿ ಸಂಘದ ಕಾರ್ಯನಿರ್ವಹಣಾಧಿಕಾರಿ ಕೇಶವ ಗೌಡ ಕೆ ಅವರು ನಡೆಸಿದ್ದಾರೆ.

ವಿಚಾರಣೆ ವೇಳೆ ಕೇಶವ ಗೌಡ ಕೆ ನೀಡಿದ ಹೇಳಿಕೆಯಂತೆ, ಮಂಗಳೂರಿನ ಜಪ್ಪಿನಮೊಗರು ನಿವಾಸಿ ಯೋಗೀಶ್ ಭಟ್ @ ಯೋಗೀಶ್ ಆಚಾರ್ಯ ಎಂಬುವವರು ಸಮೀರಾ ರಿಯಾಜ್ ಅವರನ್ನು ಪರಿಚಯಿಸಿದ್ದರು. ಆರಂಭದಲ್ಲಿ ಬ್ಯಾಂಕ್ ವರ್ಗಾವಣೆ ಮೂಲಕ 1.67 ಕೋಟಿ ರೂ. ಪಡೆದು ಸಮೀರಾ ರಿಯಾಜ್ ಖಾತೆಗೆ ವರ್ಗಾಯಿಸಿದ್ದು, ನಂತರ ಸಮೀರಾ ರಿಯಾಜ್ ಅವರು ಪ್ರತಿದಿನ ಫೋನ್ ಕರೆ ಮಾಡಿ “ಹಣ ನೀಡದಿದ್ದರೆ ಸುಳ್ಳು ಕೇಸ್ ಹಾಕಿ ಮಾನ ಹರಾಜು ಹಾಕುವುದಾಗಿ” ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಿದ್ದರಿಂದ ಒಟ್ಟು 7.26 ಕೋಟಿ ರೂ. ವರೆಗೆ ಹಂತ ಹಂತವಾಗಿ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ.

  • *ಸಾಲಗಾರರ ಸಾಲದ ಅರ್ಜಿ ಮತ್ತು ಸಭಾ ನಡಾವಳಿ ಪುಸ್ತಕದ ಹಾಳೆಗಳನ್ನು ತಿದ್ದುಪಡಿ ಮಾಡಿ ನಕಲಿ ದಾಖಲೆ ಸೃಷ್ಟಿ
  • *ಅಧ್ಯಕ್ಷರು ಮತ್ತು ನಿರ್ದೇಶಕರು ಸಹಿ ಮಾಡಿದ ನಂತರ ತನ್ನ ಅನುಕೂಲಕ್ಕೆ ಹೆಚ್ಚುವರಿಯಾಗಿ ಬರೆದು ಫೋರ್ಜರಿ ಸಹಿ ಮಾಡಿರುವುದು
  • *ವಕೀಲರ ನಕಲಿ ಲೀಗಲ್ ಒಪಿನಿಯನ್ ಪತ್ರ ಸೃಷ್ಟಿಸಿ ಹಳೆಯ ಒಪಿನಿಯನ್ ಪತ್ರಗಳನ್ನು ಹೊಸ ಅರ್ಜಿಗಳಿಗೆ ಲಗತ್ತಿಸಿರುವುದು
  • ಸುಮಾರು 2024ರಿಂದಲೇ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಕಂಡುಬಂದಿದೆ.

ಈ ಕೃತ್ಯದಿಂದ ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ(ರಿ.) ಸುಮಾರು 6.86 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಮಾಡಿ ವಂಚನೆ ಮಾಡಿರುವುದು ತಿಳಿದು ಬಂದಿದೆ.

ಈ ಕುರಿತು ದೂರು ದಾರರು ಮಾನ್ಯ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ಡಿಸ್ ನಂಬರ್ 2495/2026 ರ ಆದೇಶದಂತೆ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಿದೆ.

ಈ ಬಗ್ಗೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

- Advertisement -

Related news

error: Content is protected !!