Saturday, October 31, 2026
spot_imgspot_img
spot_imgspot_img

ನಂದಿನಿ ಹಾಲು-ಮೊಸರು ದರ ಏರಿಕೆ: ನ.1 ರಿಂದಲೇ ಹೊಸ ದರ ಜಾರಿ

- Advertisement -
- Advertisement -

ಬೆಂಗಳೂರು: ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ಎದುರಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳಿ ಶುಕ್ರವಾರ ಆದೇಶ ಹೊರಡಿಸಿದೆ.

ಪರಿಷ್ಕೃತ ದರವು ನ.1 ರಿಂದಲೇ ಜಾರಿಗೆ ಬರಲಿದೆ. ಅರ್ಧ ಲೀಟ‌ರ್ ಮೊಸರಿನ ದರವನ್ನ 28 ರೂ. ನಿಂದ 34 ರೂ.ಗೆ ಹಾಗೂ 1 ಲೀಟರ್ ಮೊಸರಿನ ದರವನ್ನು 54 ರೂ. ನಿಂದ 68 ರೂ.ಗೆ ಹೆಚ್ಚಿಸಲಾಗಿದೆ.

  • ಟೋನ್ಡ್‌ ಹಾಲು – ಹಳೆಯ ದರ 46 ರೂ. – ಹೊಸ ದರ 54 ರೂ.
  • ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು – ಹಳೆಯ ದರ 47 ರೂ. – ಹೊಸ ದರ 56 ರೂ.
  • ಹೋಮೋಜಿನೈಸ್ಡ್‌ ಹಸುವಿನ ಹಾಲು – ಹಳೆಯ ದರ 50 ರೂ. – ಹೊಸ ದರ 58 ರೂ.
  • ಸ್ಪೆಷಲ್‌ ಟೋನ್ಡ್‌ ಹಾಲು – ಹಳೆಯ ದರ 52 ರೂ. – ಹೊಸ ದರ 64 ರೂ.
  • ಶುಭಂ ಹಾಲು – ಹಳೆಯ ದರ 52 ರೂ. – ಹೊಸ ದರ 64 ರೂ.
  • ಜೋಮೋಜಿನೈಸ್ಡ್‌ ಶುಭಂ ಹಾಲು – ಹಳೆಯ ದರ – 53 ರೂ. – 65 ರೂ.
  • ಮೊಸರು, 500 ಗ್ರಾಂ ಪೊಟ್ಟಣ ಹಾಲು – ಹಳೆಯ ದರ 28 ರೂ. – 34 ರೂ.
  • ಮೊಸರು, 1 ಕೆಜಿ ಪೊಟ್ಟಣ – ಹಳೆಯ ದರ 54 ರೂ. – 68 ರೂ.

ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ಕಳೆದ 5 ದಶಕಗಳಿಂದ “ರೈತರಿಂದ, ರೈತರಿಗಾಗಿ ಮತ್ತು ರೈತರಿಗೋಸ್ಕರ” ಎಂಬ ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಲಕ್ಷಾಂತರ ಹೈನುಗಾರ ರೈತರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 26.89 ಲಕ್ಷ ಹೈನುಗಾರ ರೈತ ಸದಸ್ಯರಿದ್ದು, ಸುಮಾರು 8.9 ಲಕ್ಷ ರೈತರು ಪ್ರತಿದಿನ ಹಾಲನ್ನು ಸಹಕಾರ ಸಂಘಗಳಿಗೆ ಪೂರೈಸುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರತಿದಿನ ಸರಾಸರಿ 28.60 ಕೋಟಿ ರೂ. ಪಾವತಿಸಲಾಗುತ್ತಿದೆ.

- Advertisement -

Related news

error: Content is protected !!