Sunday, November 1, 2026
spot_imgspot_img
spot_imgspot_img

ಪುತ್ತೂರು: (ನ.22) ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಅಶೋಕ ಜನಮನ”-ಪೂರ್ವಬಾವಿ ಸಭೆ

- Advertisement -
- Advertisement -

1 ಲಕ್ಷ ಜನರಿಗೆ 4 ಕೋಟಿ ವೆಚ್ಚದ ವಸ್ತ್ರ ವಿತರಣೆ -ಶಾಸಕ ಅಶೋಕ್ ಕುಮಾರ್‍ ರೈ

ಪುತ್ತೂರು: ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತೀ ವರ್ಷದಂತೆ ನಡೆಯುವ ವಸ್ತ್ರ ವಿತರಣಾ ಕಾರ್ಯಕ್ರಮ “ಅಶೋಕ ಜನಮನ”ವು ಈ ಬಾರಿ ನವೆಂಬರ್ 22 ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಶನಿವಾರ ನಡೆದ ಅಶೋಕ ಜನಮನ ಪೂರ್ವಭಾವಿ ಸಭೆಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿದರು.

ಹವಾಮಾನ ವೈಪರೀತ್ಯ ಮತ್ತು ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಈ ಮೊದಲು ನವೆಂಬರ್ 8 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ನವೆಂಬರ್ 22 ಕ್ಕೆ ಮುಂದೂಡಲಾಗಿದ್ದು, ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲು ಸಿದ್ಧತೆ ನಡೆದಿದೆ ಎಂದು ಅವರು ಹೇಳಿದರು.

1 ಲಕ್ಷ ಜನರಿಗೆ 4 ಕೋಟಿ ವೆಚ್ಚದ ವಸ್ತ್ರ ವಿತರಣೆ
ಈ ಬಾರಿ ಸುಮಾರು 1 ಲಕ್ಷಕ್ಕೂ ಅಧಿಕ ಜನರಿಗೆ ಒಟ್ಟು 4 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ದೀಪಾವಳಿ ವಸ್ತ್ರಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ವಿತರಿಸುವ ಬೃಹತ್ ಗುರಿ ಹೊಂದಲಾಗಿದೆ.

ತಟ್ಟೆ - ಸೀರೆ - ಬೆಡ್‌ಶೀಟ್ ಆಯ್ಕೆ ನಿಮ್ಮದು
ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ದೀಪಾವಳಿ ಉಡುಗೊರೆ ನೀಡಲಾಗುವುದು. ಈ ಬಾರಿ ಮೂರು ಬಗೆಯ ಉಡುಗೊರೆಗಳನ್ನು ನಿಮ್ಮ ಆಯ್ಕೆಗೆ ನೀಡಲಾಗಿದೆ. ತಟ್ಟೆ, ಸೀರೆ ಮತ್ತು ಬೆಡ್‌ಶೀಟ್‌ಗಳಲ್ಲಿ ಯಾವುದು ಬೇಕಾದರೂ ಒಂದು ಐಟಂ ಪಡೆದುಕೊಳ್ಳಬಹುದು.

ಇದು ಕಾಂಗ್ರೆಸ್ ಪಕ್ಷದ ಸಮಾವೇಶವಲ್ಲ, ಇದು ದೀಪಾವಳಿಯ ವಸ್ತ್ರ ವಿತರಣಾ ಕಾರ್ಯಕ್ರಮ. ಎಲ್ಲರ ಸಹಕಾರ ಅಗತ್ಯ. ಎಲ್ಲ ಪಕ್ಷದವರು ಇದರಲ್ಲಿ ಭಾಗವಹಿಸಬಹುದು ಎಂದು ಸಭೆಯಲ್ಲಿ ಸೇರಿದ್ದ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಮನೆಗೂ ಆಮಂತ್ರಣ ನೀಡುತ್ತಿದ್ದೇನೆ. ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು. ಟ್ರಸ್ಟ್‌ನ ಸದಸ್ಯರು ಗ್ರಾಮಗಳಿಗೆ ತೆರಳಿ ಪ್ರತಿ ಕುಟುಂಬಕ್ಕೂ ಆಹ್ವಾನ ನೀಡಲಿದ್ದಾರೆ ಎಂದು ಶಾಸಕರು ತಿಳಿಸಿದರು.

1 ಲಕ್ಷ ದೋಸೆ, ಮಧ್ಯಾಹ್ನ ಊಟದ ವ್ಯವಸ್ಥೆ
ಕಾರ್ಯಕ್ರಮಕ್ಕೆ ಆಗಮಿಸುವ ಸಹಸ್ರಾರು ಸಾರ್ವಜನಿಕರಿಗೆ ಆಹಾರ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಬಿಸಿಬಿಸಿ ದೋಸೆಗಳನ್ನು ಸಿದ್ಧಪಡಿಸುವ ವಿಶೇಷ ವ್ಯವಸ್ಥೆ ಇದ್ದು, 1 ಲಕ್ಷಕ್ಕೂ ಹೆಚ್ಚು ದೋಸೆಗಳನ್ನು ವಿತರಿಸುವ ಗುರಿ ಇದೆ. ಮಧ್ಯಾಹ್ನ 12:30 ರಿಂದ ಊಟದ ವ್ಯವಸ್ಥೆ ಇರಲಿದೆ.

ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಮುಖ ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಹಾಗೂ ಗೂಡುದೀಪ ಸ್ಪರ್ಧೆ, ವಿಶೇಷ ಸಾಧಕರಿಗೆ ಸನ್ಮಾನ ಕ್ರೀಡಾಂಗಣದಲ್ಲಿ ಜರುಗಲಿದೆ.

- Advertisement -

Related news

error: Content is protected !!