Sunday, November 1, 2026
spot_imgspot_img
spot_imgspot_img

ಬೀದ‌ರ್ ಡೆಟೀಂಗ್ ಆಪ್ ಮೂಲಕ ಪರಿಚಿತ ಯುವಕನಿಗೆ ಬ್ಲಾಕ್‌ಮೇಲ್ : ಮೂವರು ಆರೋಪಿಗಳ ಬಂಧನ

- Advertisement -
- Advertisement -

ಬೀದರ್ : ಡೆಟೀಂಗ್ ಆಪ್ ಮೂಲಕ ಅಮಾಯಕ ಯುವಕರನ್ನು ಪರಿಚಯಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಥಳಿಸಿ ಅವರ ಆಶ್ಲೀಲ ವಿಡಿಯೋ ಮತ್ತು ಪೋಟೋ ತೆಗೆದುಕೊಂಡು ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರದೀಪ್ ಗುಂಟಿ ಅವರು ತಿಳಿಸಿದ್ದಾರೆ.

ನಗರದ ನಯಾಕಮಾನ್ ನಿವಾಸಿಗಳಾದ ಝಾಯಿದ್ ಖಾನ್, ಶೋಹೆಲ್ ಖಾನ್ ಹಾಗೂ ಚೌಬಾರಾ ನಿವಾಸಿ ಫೈಯೂಮ್ ಬಂಧಿತ ಆರೋಪಿಗಳಾಗಿದ್ದಾರೆ.

ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆರೋಪಿಗಳಿಂದ 12 ಸಾವಿರ ರೂ. ನಗದು ಹಣ, 4 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನಗಳು ಹೀಗೆ ಒಟ್ಟು 2 ಲಕ್ಷ 12 ಸಾವಿರ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಡೇಟಿಂಗ್ ಆ್ಯಪ್‌ನಲ್ಲಿ ಝಾಯಿದ್ ಎಂಬಾತ ವಾಜೀದ್‌ನಿಗೆ ಗೆಳೆಯನಾಗಿದ್ದು, ವಾಜೀದ್ ಬೀದರ್‌ಗೆ ಬಂದಾಗ ಝಾಯಿದ್ ಮತ್ತು ಆತನ ಗೆಳೆಯ ಫೈಯೂಮ್ ಎಂಬಾತ ವಾಜೀದ್‌ಗೆ ಬೆದರಿಕೆ ಹಾಕಿ ಆತನಿಗೆ ಸುಮಾರು 2 ಲಕ್ಷ 50 ಸಾವಿರ ರೂ. ಬೇಡಿಕೆ ಇಟ್ಟಿದ್ದಾನೆ. ವಾಜೀದ್ ತನ್ನ ಸಂಬಂಧಿಕರಿಂದ 50 ಸಾವಿರ ರೂ. ಹಾಕಿಸಿಕೊಂಡಿದ್ದು, ಫೋನ್ ಪೇನಲ್ಲಿರುವ 2 ಸಾವಿರ ರೂ. ಸೇರಿ ಒಟ್ಟು 52 ಸಾವಿರ ರೂ. ನೀಡಿರುತ್ತಾನೆ. ಇದಲ್ಲದೆ ಜೇಬಿನಲ್ಲಿರುವ 7 ಸಾವಿರ ರೂ. ನಗದು ಹಾಗೂ ಸೌದಿಯ 500 ರಿಯಾಲ್ ಹಣವನ್ನು ಫೈಯೂಮ್ ವಸೂಲಿ ಮಾಡಿದ್ದಾನೆ.

ಇದಾದ ನಂತರ ಝಾಯಿದ್ ಮತ್ತು ಫೈಯೂಮ್ ಇಬ್ಬರೂ ವಾಜೀದ್‌ನನ್ನು ಅರೆಬಟ್ಟೆಯಲ್ಲಿ ನಿಲ್ಲಿಸಿ ದೌರ್ಜನ್ಯಕ್ಕೆ ಯತ್ನಿಸಿದ್ದರು ಮತ್ತು ವಿಡಿಯೋವನ್ನು ಚಿತ್ರೀಕರಿಸಿದ್ದರು.

ಈ ಕುರಿತು ವಾಜೀದ್ ನೀಡಿದ ದೂರಿನ ಮೇರೆಗೆ 4 ಜನರ ವಿರುದ್ಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೋರ್ವ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Related news

error: Content is protected !!