


ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಕೇಸರಿ ಅಬೀರಿ- ಅತಿಕಾರಬೈಲು ( ರಿ) ಚಂದಳಿಕೆ ಈ ಸಂಘಟನೆಯು 2015 ನವೆಂಬರ್ 15 ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಂತನೆಯೊಂದಿಗೆ ಸ್ಥಾಪನೆಗೊಂಡ ಸಂಘಟನೆಯಲ್ಲಿ ಅನೇಕ ಸಕ್ರೀಯ ಸದಸ್ಯರು ಪ್ರಸ್ತುತವಾಗಿ ಇದ್ದಾರೆ.

ಈ ಸಂಘಟನೆಯು ಬಂಟ್ವಾಳ ತಾಲೂಕು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಂದಳಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಘಟನೆಯು ಪ್ರಸ್ತುತ 12 ನೇ ವರ್ಷಕ್ಕೆ ಪಾದರ್ಪಣೆ ಮಾಡಿದೆ. ಈ ಸಂಘಟನೆಯಲ್ಲಿ ವಿಠಲ ಪೂಜಾರಿ ಅತಿಕಾರಬೈಲು, ಚಂದ್ರಹಾಸ ಕುಲಾಲ್ ಅಬೀರಿ,ಪದ್ಮನಾಭ ಶೆಟ್ಟಿ ಚಪುಡಿಯಡ್ಕ, ಸುಶಾಂತ್ ಸಾಲಿಯಾನ್ ಚಂದಳಿಕೆ, ದಿವಾಕರ ಶೆಟ್ಟಿ ಅಬೀರಿ, ಗಂಗಾಧರ ಪೂಜಾರಿ ಪರನೀರು, ಚಿದಾನಂದ ಶೆಟ್ಟಿ ಉಜಿರೆಮಾರು, ಗಣೇಶ್ ಪೂಜಾರಿ ಪಟ್ಲ, ಯೋಗೀಶ ಕೇಪುಳಗುಡ್ಡೆ, ವನಿತ್ ಸಾಲಿಯಾನ್ ಅಬೀರಿ, ವನಿತ್ ಜೋಗಿ ಡೆಪ್ಪಿನಿ ಮತ್ತು ಪ್ರಸ್ತುತವಾಗಿ ಶಶಿ ಕೇಪುಳಗುಡ್ಡೆ ಇವರು ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ಪಟ್ಲ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಭರತ್ ಜೋಗಿ ಇವರಗಳು ಸೇವೆಯಯನ್ನು ಸಲ್ಲಿಸುತ್ತಾ ಇದ್ದಾರೆ.
ಅಲ್ಲದೇ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ಗೌರವ ಅಧ್ಯಕ್ಷರಾಗಿದ್ದಾರೆ. ನಾವು ಕಳೆದ 9 ವರ್ಷಗಳಿಂದ ಸಂಘದ ಸದಸ್ಯರು ಒಂದು ದಿನದ ವೇತನವನ್ನು ಮತ್ತು ಕೆಲವು ದಾನಿಗಳಿಂದ ಹಣ ಸಂಗ್ರಹಣೆ ಮಾಡಿ ದತ್ತಿನಿಧಿ ಎಂಬ ಯೋಜನೆಯಲ್ಲಿ ಹಲವಾರು ಬಡವರ್ಗದ ಅನಾರೋಗ್ಯದಲ್ಲಿರುವರಿಗೆ ಪ್ರತಿ ತಿಂಗಳು 10,000 ರೂಪಾಯಿ ಮತ್ತು ದೈನಂದಿನ ಖರ್ಚಿಗಾಗಿ 52 ಕೆ.ಜಿ ಅಕ್ಕಿಯನ್ನು ನೀಡುತ್ತಾ ಬಂದಿದ್ದು, ಈವರೆಗೆ ಒಟ್ಟು 10,62,530 ರೂಪಾಯಿ ಮತ್ತು 2856 ಕೆ. ಜಿ ಅಕ್ಕಿಯನ್ನು ನೀಡಲಾಗಿದೆ. ಅಲ್ಲದೇ ಚಂದಳಿಕೆ ಭಾಗದಲ್ಲಿ ನಮ್ಮ ಸಂಘಟನೆಯ ಕಾರ್ಯಾಲಯವನ್ನು ಸರಿ ಸುಮಾರು 3.50 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಲ್ಲದೇ ಚಂದಳಿಕೆ ಹೃದಯ ಭಾಗದಲ್ಲಿ 60,000 ರೂ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಹಲವಾರು ಜನರಿಗೆ ತುರ್ತು ಸಂದರ್ಭದಲ್ಲಿ ರಕ್ತದಾನವನ್ನು ಮಾಡಲಾಗಿದೆ.
10 ಕ್ಕಿಂತ ಹೆಚ್ಚು ಸದಸ್ಯರು 15 ಬಾರಿ ಕಿಂತಲೂ ಹೆಚ್ಚು ಬಾರಿ ರಕ್ತದಾನ ಮಾಡಿರುತ್ತಾರೆ. ಮಡಿಕೇರಿಯಲ್ಲಿ ಪ್ರವಾಹ ಬಂದ ಸಂಧರ್ಭ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ 20,000 ರೂಪಾಯಿ ಮೌಲ್ಯದ ದಿನಸಿ ಸಾಮಾನುಗಳನ್ನು ನೀಡಲಾಗಿದೆ. ಅಲ್ಲದೇ ಚಂದಳಿಕೆ ಶಾಲೆಯಲ್ಲಿ ನಮ್ಮ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಪ್ರತಿ ವರ್ಷ ಮ್ಯಾಟ್ ಕಬಡ್ಡಿ, ಯಕ್ಷಗಾನ ಮತ್ತು ನಾಟಕ ಮುಂತಾದ ಕಾರ್ಯಕ್ರಮವನ್ನು ನಡೆಸಿರುತ್ತೇವೆ. ಈ ಸಾಮಾಜಿಕ ಕಾರ್ಯಗಳನ್ನು ಗಮನಿಸಿ ನಮ್ಮ ಸಂಘಟನೆಗೆ “2024 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಬಂದಿರುತ್ತದೆ. ಈ ಎಲ್ಲಾ ಸೇವೆಯನ್ನು ಗಮನಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ (ರಿ ) ಮಜ್ಜಾರಡ್ಕದ ಸಂಘಟನೆಯು 9 ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ “ಮಜ್ಜಾರಡ್ಕ ವಿಷ್ಣು ಯುವಸಿರಿ ಸಾಂಘಿಕ 2026 ನೇ ಸಾಲಿನ ಪ್ರಶಸ್ತಿ” ನೀಡಿ ಗೌರವಿಸುತ್ತಾರೆ.








