- Advertisement -
- Advertisement -



ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನ.16 ರ ಸೋಮವಾರ ವೃಶ್ಚಿಕ ಸಂಕ್ರಮಣದಂದು ಲೋಕ ಕಲ್ಯಾಣಾರ್ಥವಾಗಿ ನವಗ್ರಹ ಸಹಿತ ಶನಿಶಾಂತಿ ಹೋಮ ನಡೆಯಲಿದೆ.
ಬೆಳಿಗ್ಗೆ 8:30ಕ್ಕೆ ಪ್ರಾರ್ಥನೆ, 9:30ಕ್ಕೆ ಸಕಲ ಗ್ರಹದೋಷ ಪರಿಹಾರಕ್ಕಾಗಿ ವಿಶೇಷ ನವಗ್ರಹ ಸಹಿತ ಶನಿಶಾಂತಿ ಹೋಮ ಆರಂಭವಾಗಲಿದೆ.
ಮಧ್ಯಾಹ್ನ 12:00 ಗಂಟೆಗೆ ಪೂರ್ಣಾಹುತಿ, 12:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ನವಗ್ರಹ ಸಹಿತ ಶನಿಶಾಂತಿ ಹೋಮದ ಶುಲ್ಕ ರೂ. 250/- ನಿಗದಿಪಡಿಸಲಾಗಿದ್ದು, ಭಕ್ತಾಭಿಮಾನಿಗಳು ಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -








