Wednesday, November 4, 2026
spot_imgspot_img
spot_imgspot_img

ಚಾರ್ಮಾಡಿ ಸೇತುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ

- Advertisement -
- Advertisement -

ಬೆಳ್ತಂಗಡಿ : ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಚಾರ್ಮಾಡಿ ಕಳ್ಳಬೇಟೆ ನಿಯಂತ್ರಣ ಕೇಂದ್ರದ ಬಳಿಯ ಸೇತುವೆಯಲ್ಲಿ ಪತ್ತೆಯಾಗಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಹೊಸಮಠ ಖಾಸಗಿ ವಿದ್ಯುತ್‌ ಉತ್ಪಾದನಾ ಕೇಂದ್ರದ ಡ್ಯಾಂಗೆ ಹೋಗುವ ದಾರಿಯ ಅರಣ್ಯ ಇಲಾಖೆಯ ಕಳ್ಳಬೇಟೆ ನಿಯಂತ್ರಣ ಕೇಂದ್ರದ ಬಳಿಯ ಸೇತುವೆಯಲ್ಲಿ 40-50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯ ಪ್ರಭಾರ ಸಬ್‌ ಇನ್ಸ್‌ಪೆಕ್ಟ‌ರ್ ಕಿಶೋ‌ರ್.ಪಿ ನೇತೃತ್ವದ ತಂಡ ಹಾಗೂ ಸೋಕೋ ತಂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹ ಬಿದ್ದಿದ್ದ ರೀತಿ ಇದೊಂದು ಕೊಲೆ ಪ್ರಕರಣವೇ ಎಂಬ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ. ಮಳೆ ನೀರಿನಲ್ಲಿ ಮೃತದೇಹ ಕೊಚ್ಚಿ ಬಂದಿರಬಹುದು ಎಂದು ಅನುಮಾನಿಸಲಾಗುತ್ತಿದೆ. ಮಂಗಳೂರು ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಲಾಗಿದೆ.

ಮೃತದೇಹವನ್ನು ಮೇಲೆತ್ತಲು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳಾದ ಸಚಿನ್‌ ಭಿಡೆ, ರವೀಂದ್ರ, ಅನಿಲ್, ಧನೇಶ್ ಸಹಕರಿಸಿದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಯು.ಡಿ.ಆ‌ರ್ ಪ್ರಕರಣ ದಾಖಲಿಸಲಾಗಿದ್ದು ತನಿಖೆನಡೆಸುತ್ತಿದ್ದಾರೆ.

- Advertisement -

Related news

error: Content is protected !!