- Advertisement -
- Advertisement -




ವಿಟ್ಲ ಜೆಸಿಐ ಇಂಡಿಯಾ ವಲಯ 15 ರ ಪೂರ್ವ ವಲಯಾಧ್ಯಕ್ಷ ದಿI ಜೆಸಿ ಲೋಕೇಶ್ ಪೆರ್ಗಡ ಇವರ ಮೆಮೋರಿಯಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ವಿಟ್ಲ ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.


ವಲಯದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ವಿದ್ಯಾರ್ಥಿ ವೇತನ ವಿತರಿಸಿದರು. ವಿಟ್ಲ ಜೆಸಿಐ ಅಧ್ಯಕ್ಷ ಸಂದೀಪ್ , ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಪ್ರಾಂಶುಪಾಲ ಜಯರಾಮ್ ರೈ, ಉಪ ಪ್ರಾಂಶುಪಾಲರುಗಳಾದ ಹೇಮಲತಾ ಮತ್ತು ಕವಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ವಿದ್ಯಾರ್ಥಿ ವೇತನ ನೀಡಿ ಸಹಕರಿದ ಟ್ರಸ್ಟ್ ನ ಅಧ್ಯಕ್ಷರಾದ ಪೂರ್ವ ಸ್ಟೇಟ್ ಪ್ರೆಸಿಡೆಂಟ್ ಜೇಸಿ ಮೋಹನ್ ದಾಸ್ ಪ್ರಭು,ಕಾರ್ಯದರ್ಶಿ ಆಗಿರುವ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಜೇಸಿ ಪುರಂದರ್ ರೈ, ಹಾಗೂ ಕೋಶಾಧಿಕಾರಿ ಜೇಸಿ ಚೆನ್ನಕೇಶವ ಇವರಿಗೆ ವಲಯ 15 ಹಾಗೂ ಜೆಸಿಐ ವಿಟ್ಲ ವತಿಯಿಂದ ಧನ್ಯವಾದ ಅರ್ಪಿಸಲಾಯಿತು.
- Advertisement -








