Monday, November 9, 2026
spot_imgspot_img
spot_imgspot_img

ಲೈಂಗಿಕ ಕಿರುಕುಳ: ಕ್ರೈಸ್ತ ಧರ್ಮಗುರು ಸಿಪ್ರಿಯನ್ ಪಿಂಟೊ ವಿರುದ್ಧ ಮತ್ತೊಂದು FIR

- Advertisement -
- Advertisement -

ಮಂಗಳೂರು: 13 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕ್ರೈಸ್ತ ಧರ್ಮಗುರು ಫಾ. ಸಿಪ್ರಿಯನ್ ಪಿಂಟೊ (65) ವಿರುದ್ದ ಇಲ್ಲಿನ ಮಹಿಳಾ ಠಾಣೆಯಲ್ಲಿ ಎಫ್‌ಆರ್ಐ ದಾಖಲಾಗಿದೆ.ಉಳ್ಳಾಲ ತಾಲ್ಲೂಕಿನ ಪೆರ್ಮನ್ನೂರು ಗ್ರಾಮದ ಸೇಂಟ್ ಸೆಬಾಸ್ಟಿಯನ್ ಚರ್ಚ್‌ಗೆ ಭಾನುವಾರ ಪ್ರಾರ್ಥನೆಗೆ ತೆರಳುತ್ತಿದ್ದ 13 ವರ್ಷ ಬಾಲಕನಿಗೆ 2026ರ ಮೇ 13ರಂದು ಆರೋಪಿ ಫಾ.ಸಿಪ್ರಿಯನ್ ಪಿಂಟೊ ಲೈಂಗಿಕ ಕಿರುಕುಳ ನೀಡಿದ್ದ ಕುರಿತು ಸಂತ್ರಸ್ತ ಬಾಲಕ ದೂರು ನೀಡಿದ್ದಾನೆ.

ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 (2) (ಲೈಂಗಿಕ ಕಿರುಕುಳ) ಹಾಗೂ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಕೊ) ಕಾಯ್ದೆಯ ಸೆಕ್ಷನ್ 8 (ಮಗುವಿಗೆ ಲೈಂಗಿಕ ಕಿರುಕುಳ) ಮತ್ತು ಸೆಕ್ಷನ್ 12ರ (ಮಗುವಿಗೆ ಲೈಂಗಿಕ ಕಿರುಕುಳ) ಅಡಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಕೇಂದ್ರ ಉಪವಿಭಾಗದ ಎಸಿಪಿ ರವೀಶ್ ನಾಯ್ಕ ಅವರಿಗೆ ವಹಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.ಆರೋಪಿ ಸಿಪ್ರಿಯನ್ ಪಿಂಟೊ ನಗರದ ವಲೆನ್ಸಿಯಾದ ಸೇಂಟ್ ವಿನ್ಸೆಂಟ್ ಫೆರೇರಾ ಚರ್ಚ್‌ನ ಧರ್ಮಗುರುವಾಗಿದ್ದಾಗ 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತು, ಅ.15ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 75 (2) ಅಡಿ ಹಾಗೂ ಪೊಕ್ಸೆ ಸೆಕ್ಷನ್ 8 ಮತ್ತು ಸೆಕ್ಷನ್ 12ರ ಅಡಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಸಿಪ್ರಿಯನ್ ಪಿಂಟೊ ಅ.18ರಂದು ಬಂಧನಕ್ಕೊಳಗಾಗಿದ್ದ. ಅ.30ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ನ್ಯಾಯಾಲಯವು ಈಚೆಗೆ ಜಾಮೀನು ನೀಡಿತ್ತು.

- Advertisement -

Related news

error: Content is protected !!