- Advertisement -
- Advertisement -
ವಿಟ್ಲ: ಯುವವಾಹಿನಿ ವಿಟ್ಲ ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನ.8ರಂದು ಘಟಕದ ಅಧ್ಯಕ್ಷ ಕೆ.ಟಿ. ಆನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ನಡೆಯಿತು.

ಸಭೆಯಲ್ಲಿ 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಧನಲಕ್ಷ್ಮಿ ವಾಚಿಸಿದರು. ಬಳಿಕ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೇಶವ ಪೂಜಾರಿ ಕೋಡಿ, ಕಾರ್ಯದರ್ಶಿಯಾಗಿ ನಿರ್ಮಲ ಕೆ., ಸುರೇಂದ್ರ ಹಾಗೂ ಕೋಶಾಧಿಕಾರಿಯಾಗಿ ಧನಲಕ್ಷ್ಮಿ ರಾಜೇಶ್ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಇತರ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಘಟಕದ ಸ್ಥಾಪಕ ಅಧ್ಯಕ್ಷ ಯಶವಂತ್ ನಿಡ್ಯ, ರಾಜೇಶ್ ವಿಟ್ಲ, ಬಿಲ್ಲವ ಸಂಘದ ಅಧ್ಯಕ್ಷ ಜಯಪ್ರಕಾಶ್ ಪಾಪೆಮಜಲು, ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ ಸೇರಿದಂತೆ ಘಟಕದ ಸದಸ್ಯರು ಹಾಗೂ ಬಿಲ್ಲವ ಸಂಘದ ಹಲವಾರು ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಕೋಶಾಧಿಕಾರಿ ಕೀರ್ತನ್ ಸಣ್ಣಗುತ್ತು ವಂದನಾರ್ಪಣೆ ಮಾಡಿದರು.
- Advertisement -








