Friday, November 13, 2026
spot_imgspot_img
spot_imgspot_img

ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ – ಶೀಘ್ರದಲ್ಲೇ ಹೊಸ ಆ್ಯಪ್ ಬಿಡುಗಡೆ : ಸಚಿವ ಯು.ಟಿ.ಖಾದರ್

- Advertisement -
- Advertisement -

ಬೆಂಗಳೂರು: ಅಡುಗೆ ಎಣ್ಣೆ ಮರುಬಳಕೆ ನಿಯಂತ್ರಣಕ್ಕೆ ಶಾಶ್ವತ ಕಡಿವಾಣ ಹಾಕಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ರಾಜ್ಯಾದ್ಯಂತ ‘ಟ್ರೇಸಬಿಲಿಟಿ ಆ್ಯಪ್’ ಜಾರಿಗೆ ತರಲು ನಿರ್ಧರಿಸಿದೆ.

ಅಡುಗೆ ಎಣ್ಣೆ ಮರುಬಳಕೆ ತಡೆಯಲು ಶೀಘ್ರದಲ್ಲೇ ಹೊಸ ಆ್ಯಪ್ ಬಿಡುಗಡೆ ಆಗುತ್ತಿದ್ದು, ಹೋಟೆಲ್, ಬೇಕರಿಗಳು ಕಡ್ಡಾಯವಾಗಿ ಅಡುಗೆ ಎಣ್ಣೆ ಖರೀದಿ ಪ್ರಮಾಣ, ಮಾರಾಟದ ಪ್ರಮಾಣ ಇಲ್ಲಿ ತಿಳಿಸಲೇಬೇಕು. ಈ ಆ್ಯಪ್ ಸಿದ್ಧಪಡಿಸಿ ಜಾರಿ ಮಾಡುವುದಕ್ಕೆ ಮೂರು ತಿಂಗಳ ಸಮಯ ತೆಗೆದುಕೊಳ್ಳಲಿದೆ. ಎಣ್ಣೆ ಖರೀದಿ ಮಾಡುವ ಹೋಟೆಲ್ ಉದ್ಯಮದಾರರು, ಬೇಕರಿ ಮಾಲೀಕರು ರಿಜಿಸ್ಟರ್ ಮಾಡಿಕೊಳ್ಳಬೇಕು. ಆ್ಯಪ್‌ನಲ್ಲಿ ಖರೀದಿ ಮಾಡಿದ ಎಣ್ಣೆ ಎಷ್ಟು? ಬಳಕೆ ಆಗಿದ್ದು ಎಷ್ಟು? ಮತ್ತೆ ಮಾರಾಟ ಮಾಡಿದ್ದು ಎಷ್ಟು ಅಂತಾ ನಮೂದು ಮಾಡಬೇಕು. ಬಯೋಗ್ಯಾಸ್ ಏಜೆನ್ಸಿಗಳಿಗೆ ವಿತರಣೆ ಮಾಡಿದ್ದು ಎಷ್ಟು ಅಂತಲೂ ಕಡ್ಡಾಯವಾಗಿ ನಮೂದು ಮಾಡಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‍ ಸ್ಪಷ್ಟಪಡಿಸಿದ್ದಾರೆ.

ಎರಡನೇ ಹಂತದಲ್ಲಿ ಮನೆಗಳಿಂದ ಕೂಡ ಮರು ಬಳಕೆ ತಡೆಗಟ್ಟಿ ಮನೆ ಮನೆಯಿಂದ ಮರು ಬಳಕೆ ಎಣ್ಣೆ ಸಂಗ್ರಹ ಮಾಡೋ ಪ್ಲ್ಯಾನ್ ಇದ್ದು, ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿಯೂ ಸಚಿವ ಖಾದರ್ ತಿಳಿಸಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!