


ಮೈಸೂರು: ಅಸ್ವಸ್ಥಗೊಂಡು ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಬಿಜೆಪಿ ಹಿರಿಯ ಮಹಿಳಾ ಕಾರ್ಯಕರ್ತೆಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಜ್ಯೂಸ್ ನೀಡಿ ಆರೈಕೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಮೈಸೂರಿನ ಕಾಸ್ಮೋಸ್ ಮೈಸೂರು ಪ್ಲಾನೆಟೋರಿಯಂ ಲೋಕಾರ್ಪಣೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, ಪ್ರಧಾನಿಯವರ ಈ ನಡೆ ಸ್ಥಳದಲ್ಲಿದ್ದವರ ಗಮನ ಸೆಳೆದಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಂಜನಗೂಡಿನ 70 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತೆ ಪ್ರೇಮಾ ಕೆ. ಅವರು ಜನದಟ್ಟಣೆ ಹಾಗೂ ಬಿಸಿಲಿನ ತಾಪದಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದರು. ಪ್ರಜ್ಞೆ ತಪ್ಪಿ ಬೀಳುವ ಸ್ಥಿತಿಯಲ್ಲಿದ್ದ ಅವರನ್ನು ಗಮನಿಸಿದ ಪ್ರಧಾನಿ ಮೋದಿ ತಕ್ಷಣ ಅವರ ಬಳಿಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆಕೂಡಲೇ ತಮ್ಮ ವೈದ್ಯಕೀಯ ತಂಡವನ್ನು ಸ್ಥಳಕ್ಕೆ ಕರೆಸಿ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದ ಮೋದಿ, ಸ್ವತಃ ಎನರ್ಜಿ ಡ್ರಿಂಕ್ ಹಾಗೂ ಜ್ಯೂಸ್ ನೀಡಿ ಆರೈಕೆ ಮಾಡಿದ್ದಾರೆ. ಪ್ರೇಮಾ ಅವರು ಚೇತರಿಸಿಕೊಳ್ಳುವವರೆಗೂ ಅವರ ಪಕ್ಕದಲ್ಲೇ ನಿಂತು ಕಾಳಜಿ ವಹಿಸಿದ್ದಾರೆ.ಅಲ್ಲದೆ, ‘ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ, ಯಾವುದೇ ಆತಂಕ ಬೇಡ’ ಎಂದು ಧೈರ್ಯ ತುಂಬಿದ್ದಾರೆ. ಪ್ರಧಾನಿ ತೋರಿದ ಕಾಳಜಿಯಿಂದ ಭಾವುಕರಾದ ಪ್ರೇಮಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಪ್ರಧಾನಿ ಮೋದಿ ಅವರು ಭದ್ರತಾ ವ್ಯವಸ್ಥೆಯ ನಡುವೆಯೂ ಅಸ್ವಸ್ಥಗೊಂಡಿದ್ದ ಹಿರಿಯ ಕಾರ್ಯಕರ್ತೆಯ ಆರೋಗ್ಯದ ಬಗ್ಗೆ ತಕ್ಷಣ ಸ್ಪಂದಿಸಿ ಆರೈಕೆ ಮಾಡಿದ ಘಟನೆ ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆದಿದೆ.







