Saturday, November 14, 2026
spot_imgspot_img
spot_imgspot_img

ತಮಿಳುನಾಡಿನ ಕಡಲೂರಿನಲ್ಲಿ ಹಕ್ಕಿ ಜ್ವರ – 5 ಫಾರ್ಮ್‌ಗಳಲ್ಲಿ 35,647 ಕೋಳಿಗಳು ಸಾವು

- Advertisement -
- Advertisement -

ಚೆನ್ನೈ: ಇಲ್ಲಿನ ಕಡಲೂರು ಜಿಲ್ಲೆಯಲ್ಲಿ ಹೆಚ್5ಎನ್1 (H1N1) ತಳಿಯು ದೃಢಪಟ್ಟಿದ್ದು, ಪರಿಣಾಮ ಒಟ್ಟು 35,647 ಕೋಳಿಗಳು ಸಾವನ್ನಪ್ಪಿವೆ. ಪರಿಣಾಮ ಜಿಲ್ಲಾಡಳಿತವು ಎಲ್ಲಾ ಕೋಳಿಗಳನ್ನು ಕೊಲ್ಲಲು ನಿರ್ಧರಿಸಿದೆ.

ನ.5ರಂದು ಕಡಲೂರು ಜಿಲ್ಲೆಯ ಕುರಿಂಜಪಾಡಿ ತಾಲೂಕಿನ ಕತ್ತಿಯಾಂಕುಪ್ಪಂ ಗ್ರಾಮದ ಕೋಳಿ ಫಾರಂ ಒಂದರಲ್ಲಿ ಸಂಗ್ರಹಿಸಿದ ಕೋಳಿ ಮಾದರಿಗಳಲ್ಲಿ ಹೆಚ್5ಎನ್1 ವೈರಸ್ ಇರುವುದು ದೃಢಪಟ್ಟಿದೆ. ನಂತರ ಆ ಮಾದರಿಯನ್ನು ಭೋಪಾಲ್‌ನಲ್ಲಿರುವ ಎನ್‌ಐಹೆಚ್‌ಎಸ್‌ಎಡಿಗೆ ಕಳುಹಿಸಲಾಗಿತ್ತು. ಪರೀಕ್ಷೆ ನಡೆಸಿದ ಬಳಿಕ ನ.13ರಂದು ಹೆಚ್5ಎನ್1 ವೈರಸ್ ಇರುವುದು ದೃಢಪಟ್ಟಿದೆ.

ಜಿಲ್ಲಾಧಿಕಾರಿ ಸಿಬಿ ಆದಿತ್ಯ ಸೆಂಥಿಲ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಅ.30ರಂದು ತಿಯಾಗವಲ್ಲಿ ಪಂಚಾಯಿತಿಯ ತಮನಾಂಪಟ್ಟಿ ಗ್ರಾಮದ ಫಾರಂ ಒಂದರಲ್ಲಿ ಮೊದಲ ಬಾರಿಗೆ ಹಠಾತ್ ಸಾವು ವರದಿಯಾದಾಗಿನಿಂದ, ನ.13ರವರೆಗೆ ಒಟ್ಟು 35,647 ಕೋಳಿಗಳು ಸಾವನ್ನಪ್ಪಿವೆ ಎಂದಿದ್ದಾರೆ.

ನಾವು ಆರಂಭದಲ್ಲಿ ಕೇವಲ ಒಂದು ಮಾದರಿಯನ್ನು ಕಳುಹಿಸಿದ್ದೇವೆ. ಆದರೆ ಒಟ್ಟು 15 ಫಾರಂಗಳಿವೆ, ಅದರಲ್ಲಿ 10 ಫಾರಂಗಳಲ್ಲಿ ಎಲ್ಲಾ ಪಕ್ಷಿಗಳು ಈಗಾಗಲೇ ಸಾವನ್ನಪ್ಪಿವೆ. ಹೀಗಾಗಿ ಕೇವಲ 5 ಫಾರಂಗಳು ಉಳಿದಿವೆ. ಅವುಗಳಲ್ಲಿನ ಎಲ್ಲಾ ಪಕ್ಷಿಗಳನ್ನು ಕೊಲ್ಲಲು ನಿರ್ಧರಿಸಿದ್ದೇವೆ. ಈ ಉದ್ದೇಶಕ್ಕಾಗಿ ಒಟ್ಟು 9 ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ

- Advertisement -

Related news

error: Content is protected !!