Monday, November 16, 2026
spot_imgspot_img
spot_imgspot_img

ವಿಶ್ವಸಂಸ್ಥೆಯಲ್ಲಿ ಮರಣದಂಡನೆ ರದ್ದತಿ ನಿರ್ಣಯಕ್ಕೆ ಭಾರತ ಸೇರಿದಂತೆ 33 ದೇಶಗಳಿಂದ ವಿರೋಧ

- Advertisement -
- Advertisement -

ಜಿನೀವಾ: ವಿಶ್ವಸಂಸ್ಥೆಯಲ್ಲಿ ಮರಣದಂಡನೆ ರದ್ಧತಿ ನಿರ್ಣಯಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ. ಮರಣದಂಡನೆಗೆ ತಡೆ ನೀಡುವಂತೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕಾರ ಆಗಿತ್ತು. ಮೆಕ್ಸಿಕೋ ಮಂಡಿಸಿದ್ದ ನಿರ್ಣಯಕ್ಕೆ 133 ದೇಶಗಳು ಬೆಂಬಲ ವ್ಯಕ್ತಪಡಿಸಿದವು. ಆದರೆ, ಭಾರತ ಸೇರಿದಂತೆ 33 ದೇಶಗಳಿಂದ ನಿರ್ಣಯಕ್ಕೆ ವಿರೋಧ ವ್ಯಕ್ತವಾಗಿದೆ.

16 ದೇಶಗಳು ಮತದಾನದಿಂದ ದೂರ ಉಳಿದಿವೆ. ಮರಣದಂಡನೆ ರದ್ಧತಿಗೆ ಜಾಗತಿಕ ಒಮ್ಮತವಿಲ್ಲ ಎಂದು ಭಾರತ ಅಭಿಪ್ರಾಯಪಟ್ಟಿದ್ದು, ಪ್ರತಿ ಸಾರ್ವಭೌಮ ರಾಷ್ಟ್ರಕ್ಕೂ ತನ್ನದೇ ನ್ಯಾಯಾಂಗ ವ್ಯವಸ್ಥೆ ಮತ್ತು ಶಿಕ್ಷೆ ನಿರ್ಧರಿಸುವ ಹಕ್ಕಿದೆ ಎಂದು ಭಾರತದ ಪ್ರತಿಪಾದಿಸಿದೆ.

ಭಾರತದಲ್ಲಿ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ವಿಧಿಸಲಾಗುತ್ತದೆ. ಗರ್ಭಿಣಿಯರು, ಅಪ್ರಾಪ್ತರು, ವೃದ್ಧರು ಹಾಗೂ ಮಾನಸಿಕ ಅಸ್ವಸ್ಥರಿಗೆ ಮರಣದಂಡನೆ ವಿಧಿಸದಂತೆ ನಿರ್ಣಯದಲ್ಲಿ ಭಾರತ ಮನವಿ ಮಾಡಿದೆ.

ಮರಣದಂಡನೆ ವಿಧಿಸಬಹುದಾದ ಅಪರಾಧಗಳ ಪಟ್ಟಿಯನ್ನು ಕಡಿಮೆ ಮಾಡುವಂತೆಯೂ ನಿರ್ಣಯದಲ್ಲಿ ಪ್ರಸ್ತಾಪವಾಗಿದ್ದು, ಅಮೆರಿಕ, ಚೀನಾ, ಜಪಾನ್, ಪಾಕಿಸ್ತಾನ, ಇರಾನ್, ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿವೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!