- Advertisement -
- Advertisement -



ಬೆಂಗಳೂರು: ಚಿಕ್ಕಮ್ಮನ ಮಗಳ ಮದುವೆ ಕಾರ್ಯಕ್ರಮಕ್ಕೆ ಬೈಕ್ನಲ್ಲಿ ತೆರಳುವ ವೇಳೆ ಹಿಟ್ & ರನ್ಗೆ ಯುವಕ ಬಲಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಬಳಿ ನಡೆದಿದೆ.
ಕೃಷ್ಣ (25) ಹಿಟ್ & ರನ್ಗೆ ಬಲಿಯಾದ ಯುವಕ. ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಭಾನುವಾರ ರಾತ್ರಿ 12 ಗಂಟೆಗೆ ನಡೆದಿರುವ ಘಟನೆ ಸಂಭವಿಸಿದೆ. ಕೃಷ್ಣ ಇತ್ತೀಚಿಗೆ ಕಾವೇರಿ ಎಂಬಾಕೆಯನ್ನ ಮದುವೆಯಾಗಿದ್ದ. ಕೃಷ್ಣ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ವಾಸವಾಗಿದ್ದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಇಂದು ಬೆಳಿಗ್ಗೆ ಚಿಕ್ಕಮ್ಮನ ಮಗಳ ಮದುವೆ ಇದ್ದ ಹಿನ್ನೆಲೆ ಬೈಕ್ನಲ್ಲಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಘಟನೆ ಸಂಬಂಧ ತ್ಯಾಮಗೊಂಡ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ನೆಲಮಂಗಲ ಶವಾಗಾರಕ್ಕೆ ರವಾನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.
- Advertisement -








