Monday, November 16, 2026
spot_imgspot_img
spot_imgspot_img

ಶಬರಿಮಲೆ ಅಯ್ಯಪ್ಪ ದೇಗುಲ ನಾಳೆಯಿಂದ ಭಕ್ತರಿಗೆ ಮುಕ್ತ: ದಿನಕ್ಕೆ 80 ಸಾವಿರ ಯಾತ್ರಿಕರಿಗೆ ಮಾತ್ರ ದರ್ಶನ ಅವಕಾಶ

- Advertisement -
- Advertisement -

ತಿರುವನಂತಪುರಂ: ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಪ್ರಸಿದ್ಧ ಶಬರಿಮಲೆಯಲ್ಲಿ ವಾರ್ಷಿಕ ಮಂಡಲಕಾಲ-ಮಕರವಿಳಕ್ಕು ತೀರ್ಥಯಾತ್ರೆಯ ಹಿನ್ನೆಲೆ ನಾಳೆಯಿಂದ (ನ.17) ಶಬರಿಮಲೆ ದೇಗುಲ ತೆರೆಯಲಿದೆ.

ಔಪಚಾರಿಕವಾಗಿ ಇಂದು (ನ.16) ಸಂಜೆ 5 ಗಂಟೆಗೆ ಬಾಗಿಲು ತೆರೆಯಲಿದ್ದು, ಭಕ್ತರಿಗೆ ನಾಳೆಯಿಂದ ದರ್ಶನಕ್ಕೆ ಅವಕಾಶವಿರಲಿದೆ. ಈ ಬಾರಿ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದು, ದಿನಕ್ಕೆ ಕೇವಲ 80,000 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಉದ್ಘಾಟನಾ ದಿನದಂದು ದರ್ಶನಕ್ಕಾಗಿ ಅಂದಾಜು 30,000 ಭಕ್ತರು ಈಗಾಗಲೇ ಸ್ಲಾಟ್‌ಗಳನ್ನು ಕಾಯ್ದಿರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಭಕ್ತರ ನಿರ್ವಹಣೆ ಭಾಗವಾಗಿ ನಾಳೆಯಿಂದ ಪ್ರತಿದಿನ 80,000 ಯಾರ್ಥಯಾತ್ರಿಗಳ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಇವುಗಳಲ್ಲಿ 60,000 ಸ್ಲಾಟ್‌ಗಳನ್ನು ವರ್ಚುವಲ್ ಕ್ಯೂ ಸಿಸ್ಟಮ್ ಮೂಲಕ ಹಂಚಿಕೆ ಮಾಡಲಾಗಿದೆ ಮತ್ತು 10,000 ಸ್ಥಾನಗಳನ್ನು ನಿಲಕ್ಕಲ್‌ನಲ್ಲಿ ಸ್ಪಾಟ್ ಬುಕಿಂಗ್‌ಗಾಗಿ ಕಾಯ್ದಿರಿಸಲಾಗಿದೆ.

ಎರುಮೇಲಿ, ಪುಲ್ಲುಮೇಡಿನ ಸಾಂಪ್ರದಾಯಿಕ ಅರಣ್ಯ ಮಾರ್ಗಗಳ ಮೂಲಕ ತಲಾ 3,000 ಮತ್ತು ವಂಡಿಪೆರಿಯಾರ್‌ನ ಸತ್‌ರಾಮ್ ಮಾರ್ಗದ ಮೂಲಕ 2,000 ಸೀಮಿತ ಕೋಟಾಗಳು ಲಭ್ಯವಿವೆ. ಇವೆಲ್ಲಕ್ಕೂ ಮುಂಚಿತವಾಗಿ ಆನ್‌ಲೈನ್ ಬುಕಿಂಗ್ ಕಡ್ಡಾಯವಾಗಿದೆ. ಪಂಬಾದಲ್ಲಿ ಸ್ಪಾಟ್ ಬುಕಿಂಗ್ ಲಭ್ಯವಿರುವುದಿಲ್ಲ.

ಈ ಸೀಸನ್‌ನಲ್ಲಿ ದೇವಸ್ಥಾನದ ಸಮಯದಂತೆ ಪ್ರತಿದಿನ ಬೆಳಗ್ಗೆ 3 ಗಂಟೆಗೆ ಬಾಗಿಲು ತೆರೆಯಲಾಗುತ್ತದೆ, ಮತ್ತು ನೆಯ್ಯಭಿಷೇಕವು ಬೆಳಗ್ಗೆ 11ರವರೆಗೆ ಮುಂದುವರಿಯುತ್ತದೆ. ಮಧ್ಯಾಹ್ನದ ಪೂಜೆಯ ನಂತರ ಮಧ್ಯಾಹ್ನ 1 ಗಂಟೆಗೆ ದೇಗುಲ ಮುಚ್ಚಲಿದ್ದು, ಮಧ್ಯಾಹ್ನ 3 ಗಂಟೆಗೆ ಪುನಃ ತೆರೆಯುತ್ತದೆ ಮತ್ತು ಹರಿವರಾಸನಂ ಹಾಡಿದ ನಂತರ ರಾತ್ರಿ 11 ಗಂಟೆಯವರೆಗೆ ತೆರೆದಿರುತ್ತದೆ.

ಮಕರವಿಳಕ್ಕು ಹಬ್ಬವು ಜನವರಿ 14ರಂದು ಬರಲಿದ್ದು, ಜನವರಿ 20ರಂದು ಬೆಳಗ್ಗೆ 7 ಗಂಟೆಗೆ ದೇವಾಲಯವು ಮುಚ್ಚುವುದರೊಂದಿಗೆ ಸಂಪೂರ್ಣ ಸೀಸನ್ ಅಂತ್ಯಗೊಳ್ಳುತ್ತದೆ.

ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಜಿಲ್ಲಾ ಆಡಳಿತವು ತಾತ್ಕಾಲಿಕ ಸೌಲಭ್ಯಗಳು, ವೈದ್ಯಕೀಯ ಸಹಾಯ ಕೇಂದ್ರಗಳು ಮತ್ತು ರಸ್ತೆಗಳ ಉದ್ದಕ್ಕೂ ಸಂಚಾರ ನಿಯಂತ್ರಣ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕೈಗೊಂಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!