Tuesday, November 17, 2026
spot_imgspot_img
spot_imgspot_img

ಆರೈಕೆ ಮಾಡಲಾಗದೆ ತಾಯಿಯನ್ನೇ ಕೊಂದ ನಿರುದ್ಯೋಗಿ – ಸಹೋದರಿಗೆ ಪತ್ರ ಬರೆದು ಪೊಲೀಸರಿಗೆ ಶರಣು

- Advertisement -
- Advertisement -

ಕೋಲ್ಕತ್ತಾ: ಕೊರೋನಾ ಬಳಿಕ ಕೆಲಸ ಕಳೆದುಕೊಂಡಿದ್ದ ಮಗ ತಾಯಿಯನ್ನು ಸಾಕಲಾಗದೇ ಕತ್ತು ಹಿಸುಕಿ ಕೊಂದಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

ಕೋಲ್ಕತ್ತಾದ ಹರಿದೇವ್‌ಪುರದ ನಿವಾಸಿ ಸಾಗರ್ ಘೋಷ್(67) ಎಂಬುವ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಕೋವಿಡ್ (COVID 19) ಬಂದಾಗಿನಿಂದ ಸಾಗರ್‌ಗೆ ಸರಿಯಾದ ಕೆಲಸವಿರಲಿಲ್ಲ. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ, ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ. ಇದರ ಜೊತೆಗೆ 85 ವರ್ಷದ ತಾಯಿ ಉಮಾ ರಾಣಿ ಘೋಷ್ ಅವರಿಗೆ ವಯೋಸಹಜ ಕಾಯಿಲೆಗಳಿದ್ದವು. ಹಣದ ಮುಗ್ಗಟ್ಟು ಮತ್ತು ತಾಯಿಯ ಅನಾರೋಗ್ಯವನ್ನು ನಿಭಾಯಿಸಲು ಸಾಧ್ಯವಾಗದೆ ಸಾಗರ್ ಕಂಗಾಲಾಗಿದ್ದ.

ಸೋಮವಾರ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಸಾಗರ್ ತಮ್ಮ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತಾನೇ ಪೊಲೀಸರಿಗೆ ಕರೆ ಮಾಡಿ ತಪ್ಪೊಪ್ಪಿಕೊಂಡಿದ್ದಾನೆ.

ಘಟನೆ ನಡೆದಾಗ ಸಾಗರ್‌ನ ಸಹೋದರಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಸಹೋದರಿಗಾಗಿ ಸಾಗರ್, ʼನಾನು ಅಮ್ಮನನ್ನು ಕಷ್ಟದಿಂದ ಮುಕ್ತಗೊಳಿಸಿದ್ದೇನೆ. ನೀನು ಮನೆಗೆ ಬರುವಷ್ಟರಲ್ಲಿ ನಾನೂ ಇರುವುದಿಲ್ಲʼ ಎಂದು ಪತ್ರದಲ್ಲಿ ಬರೆದಿಟ್ಟಿದ್ದ.

ಸಾಗರ್‌ನ ಪತ್ನಿ ಮತ್ತು ಮಗ ಈತನಿಂದ ದೂರವಾಗಿ ಬೇರೆಡೆ ವಾಸಿಸುತ್ತಿದ್ದಾರೆ. 2020-21ರಲ್ಲಿ ಸಾಗರ್ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹಲ್ಲೆ ಮಾಡಿದ್ದ. ಇದೇ ಕಾರಣಕ್ಕೆ ಪತ್ನಿ ಬೇರಾಗಿದ್ದರು. ಪತ್ನಿ ಬಿಟ್ಟು ಹೋದಾಗಿನಿಂದ ಸಾಗರ್ ಮಾನಸಿಕವಾಗಿ ಕುಗ್ಗಿಹೋಗಿದ್ದ. ಆತನ ನಡವಳಿಕೆಯೂ ಬದಲಾಗಿತ್ತು ಎಂದು ಅಕ್ಕಪಕ್ಕದವರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆಸ್ತಿ ವಿಚಾರ ಅಥವಾ ಬೇರೆ ಏನಾದರೂ ಕಾರಣವಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!