- Advertisement -
- Advertisement -






ಗದಗ : ಹೊಸಮನೆಯ ಅಡಿಪಾಯ ಅಗೆಯುವ ಸಮಯದಲ್ಲಿ ಮಣ್ಣಿನ ಚೆಂಬೊಂದರಲ್ಲಿ 1 ಕೆಜಿಯಷ್ಟು ತೂಕದ ಹಳೆಯ ಚಿನ್ನಾಭರಣಗಳು ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್ ಸಂಖ್ಯೆ 4ರ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ನಿಧಿ ಪತ್ತೆಯಾಗಿದೆ. ಹಳೆಯ ಮನೆಯನ್ನು ತೆಗೆದು ಹೊಸ ಮನೆ ನಿರ್ಮಾಣಕ್ಕಾಗಿ ಭೂಮಿ ಅಗೆಯುತ್ತಿದ್ದಾಗ ತಾಮ್ರದ ಚೆಂಬು ಸಿಕ್ಕಿದೆ. ಚೆಂಬಿನೊಳಗೆ ಚಿನ್ನದ ಬಳೆಗಳು, ಚೈನ್‌ಗಳು, ಉಂಗುರಗಳು ಮತ್ತು ಇತರ ಆಭರಣಗಳು ಪತ್ತೆಯಾಗಿವೆ .
ಆ ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ ದುರ್ಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮತ್ತು ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ನಿಧಿಯನ್ನು ಪೊಲೀಸರು ವಶಪಡಿಸಿಕೊಂಡು ಸುರಕ್ಷಿತವಾಗಿ ಇಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ.
- Advertisement -








