


ಬಂಟ್ವಾಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಧರ್ಮನಗರ-ಕಂಬಳಬೆಟ್ಟುವಿನ ಶ್ರೀ ಸಿದ್ಧಿವಿನಾಯಕ ಯುವಕ ಮಂಡಲದ ವತಿಯಿಂದ ದಿವಂಗತ ಸುರೇಶ್ ಕಾರ್ಯಾಡಿ ಅವರ ಸ್ಮರಣಾರ್ಥ ನಿರ್ಮಿಸಲಾದ ಸಾರ್ವಜನಿಕ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭ ನ.22ರಂದು ಬೆಳಿಗ್ಗೆ 10 ಗಂಟೆಗೆ ಉರಿಮಜಲು ಜಂಕ್ಷನ್‌ನಲ್ಲಿ ನಡೆಯಲಿದೆ.

ಯದುನಂದಿನಿ ಮಂಗಳೂರು ಅವರು ನೀರಿನ ಘಟಕವನ್ನು ಉದ್ಘಾಟಿಸಲಿದ್ದು, ಇಡ್ತಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷಾ ಡಿ., ಹಿರಿಯ ಕಾರ್ಯಕರ್ತ ಭುಜಂಗ ಪೂಜಾರಿ ಕಲ್ಲಡ್ಕ ಹಾಗೂ ಧರ್ಮನಗರ ಜಯದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪ ಗೌಡ ಉರಿಮಜಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಬೆಳಿಗ್ಗೆ 10.30ಕ್ಕೆ ಯುವಕ ಮಂಡಲದ ಕಚೇರಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, 11.15ಕ್ಕೆ ಲಕ್ಕಿ ಡ್ರಾ ಹಾಗೂ 11.30ಕ್ಕೆ ಯುವಕ ಮಂಡಲದ ಸದಸ್ಯರಿಗೆ ಒಳಾಂಗಣ ಆಟೋಟ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂಡಲದ ಅಧ್ಯಕ್ಷ ಜನಾರ್ದನ ಪೂಜಾರಿ ಕಾರ್ಯಾಡಿ, ಕಾರ್ಯದರ್ಶಿ ಶೈಲೇಶ್ ಶೆಟ್ಟಿ ಮೂಡೈಮಾರ್ ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








