


ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಕೇಂದ್ರಕಛೇರಿ, ತುಮಕೂರು ನೇತ್ರಾವತಿ ವಲಯ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ವಿಟ್ಲ ನಗರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಯ್ಯಪ್ಪ ಬೆಟ್ಟ ಕುಂಡಡ್ಕ ಶಾಖೆಯಿಂದ ಹಮ್ಮಿಕೊಂಡಿರುವ 48 ದಿವಸಗಳ ಉಚಿತ ಯೋಗ ಶಿಕ್ಷಣ ತರಗತಿಯ ಉದ್ಘಾಟನೆಯು ನ. 22 ರಂದು ನಡೆಯಿತು.
ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಕುಂಡಡ್ಕ ಇಲ್ಲಿ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಜಿಲ್ಲಾ ಸಮಿತಿ, ಜಿಲ್ಲಾ ಸಹ ಸಂಚಾಲಕರು, ನಗರ ಸಂಚಾಲಕರು ಹಾಗೂ ಮುಖ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ಅವಿಸ್ಮರಣೀಯವಾಗಿ ನಡೆಯಿತು.
ಕಾರ್ಯಕ್ರಮವು ಅಯ್ಯಪ್ಪ ಬೆಟ್ಟ ಕುಂಡಡ್ಕ ಶಾಖೆಯ ಯೋಗ ಬಂಧುಗಳ ಭಕ್ತಿ ಭಾವದ ಭಜನೆಯೊಂದಿಗೆ ಪ್ರಾರಂಭವಾಯಿತು. ಶ್ರೀಮತಿ ಪ್ರೇಮಲತಾ ಅವರ ನಿರೂಪಣೆ, ಗೋವಿಂದರಾಜ ಅವರ ಪ್ರಾರ್ಥನೆ, ಶ್ರೀಯುತ ಉಮೇಶ ಅವರ ಸ್ವಾಗತ ಅತ್ಯುತ್ತಮವಾಗಿತ್ತು. ಗಣ್ಯರಿಂದ ದೀಪ ಪ್ರಜ್ವಲನೆ ಮೂಲಕ ಯೋಗ ತರಗತಿಗೆ ಚಾಲನೆ ನೀಡಲಾಯಿತು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀಮತಿ ವೃಂದಾ, ವಿಟ್ಲ ನಗರ ಭಜನಾ ಪ್ರಮುಖರು, ಸಮಿತಿಯ ಪರಿಚಯ ಹಾಗೂ ಧ್ಯೇಯೋದ್ದೇಶಗಳನ್ನು ಮನಮುಟ್ಟುವಂತೆ ತಿಳಿಸಿದರು. ಯೋಗದಿಂದ ತಮಗಾದ ಅನುಭವಗಳನ್ನು ಹಂಚಿಕೊಂಡರು.
ಶಾಖೆಯ ಯೋಗ ಬಂಧುಗಳಾದ ನವೀನ್, ವಸಂತ, ಸುರೇಶ, ಚಂದ್ರಕಲಾ, ಲತಾ, ಗೀತಾ, ಈಶ್ವರ ಭಟ್ ಅವರು ತಮ್ಮ ಪೂರ್ಣ ಅನುಭವ ಹಂಚಿಕೊಂಡರು.
ಮುಖ್ಯ ಅಭ್ಯಾಗತರಾದ ವಿನೋದ, ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಕುಂಡಡ್ಕ, ಎಲ್ಲಾ ಯೋಗ ಬಂಧುಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಚೆನ್ನಪ್ಪ ತಮ್ಮ ಅಂತರಾಳದ ಅನುಭವಗಳು ಹಾಗೂ ಯೋಗದಿಂದ ನಮಗೆ ತುಂಬಾ ಪ್ರಯೋಜನವಿದೆ ಎಂದು ತಿಳಿಸಿದರು. ಹೊಸ ಯೋಗ ಬಂಧುಗಳಿಗೆ ಶ್ರೀಮತಿ ಚಂದ್ರಕಲಾ ಅವರು ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಸುನೀಲ್ ಅವರು ವಂದನಾರ್ಪಣೆ ಸಲ್ಲಿಸಿದರು. ನಂತರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಯ್ಯಪ್ಪ ಬೆಟ್ಟ ಶಾಖೆಯ ಯೋಗ ಬಂಧುಗಳು ತಯಾರಿಸಿದ ರುಚಿಯಾದ ಪ್ರಸಾದವನ್ನು ಅನ್ನಪೂರ್ಣೇಶ್ವರಿ ಮಂತ್ರ ಪಠಣದ ಬಳಿಕ ಸ್ವೀಕರಿಸಲಾಯಿತು.
ಈ ಕಾರ್ಯಕ್ರಮಕ್ಕೆ ನಗರ ಸಂಚಾಲಕರು, ನಗರ ಪ್ರಮುಖರು ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಅಯ್ಯಪ್ಪ ಬೆಟ್ಟ ಶಾಖೆಯ ಎಲ್ಲಾ ಯೋಗಬಂಧುಗಳ ಅವಿರತ ಶ್ರಮ ಒಗ್ಗಟ್ಟಿನ ಸೇವಾಮನೋಭಾವನೆ ಅತ್ಯದ್ಭುತ ಕಾರ್ಯಕ್ರಮವಾಗಿ ರೂಪುಗೊಂಡಿತು.
ಈ ಕಾರ್ಯಕ್ರಮದಲ್ಲಿ ವಿಟ್ಲ ನಗರದ ಶ್ರೀ ಪಂಚಲಿಂಗೇಶ್ವರ ಶಾಖೆ, ಪುಣಚ ಶಾಖೆ, ನೇರಳಕಟ್ಟೆ, ನೀರ್ಕಜೆ ಶಾಖೆಯ ಅಣ್ಣನವರು, ಅಕ್ಕಂದಿರು ಭಾಗವಹಿಸಿದ್ದರು. ಸುಮಾರು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.








