Saturday, July 5, 2025
spot_imgspot_img
spot_imgspot_img

ಉಳ್ಳಾಲ: ಸಮುದ್ರ ಪಾಲಾದ ಕ್ಯಾಬ್ ಚಾಲಕ!!

- Advertisement -
- Advertisement -

ಉಳ್ಳಾಲ: ಬೆಂಗಳೂರು ಮೂಲದ ಕ್ಯಾಬ್ ಚಾಲಕ ಯುವಕ ನೋರ್ವ ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ಸಮುದ್ರ ಪಾಲಾದ ಘಟನೆ ವರದಿಯಾಗಿದೆ. ಮೃತನನ್ನು ನಾಗರಾಜ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಸಮ್ಮರ್ ಸ್ಯಾಂಡ್ ಬೀಚ್ ಗೆ ಪ್ರವಾಸಿಗರನ್ನು ಕರೆದುಕೊಂಡು ಬಂದು, ಸಮುದ್ರದ ತೆರೆಗಳಲ್ಲಿ ಆಡುತ್ತಿದ್ದಾಗಈ ದುರ್ಘಟನೆ ನಡೆದಿದೆ.

ವಿಹಾರಕ್ಕೆಂದು ಇಂದು ಮಧ್ಯಾಹ್ನ ಉಳ್ಳಾಲಕ್ಕೆ ಈ ಪ್ರವಾಸಿಗರು ಆಗಮಿಸಿದ್ದರು ಎಂದು ವರದಿಯಾಗಿದೆ.ಸಮ್ಮರ್ ಸ್ಯಾಂಡ್ ನ ದೂರದ ಮೊಗವೀರಪಟ್ಟಣ ಬೀಚ್ ಪ್ರದೇಶದಲ್ಲಿ ಸಾಮಾನ್ಯವಾಗಿ ಮೀನುಗಾರರು ಮತ್ತು ಸ್ಥಳೀಯ ಜೀವರಕ್ಷಕ ಈಜುಗಾರರು ಇರುತ್ತಾರೆ. ಆದರೆ ಇಂದು ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿ ಸ್ಥಳೀಯರು ಯಾರು ಇರದ್ದರಿಂದ ಸಮುದ್ರಪಾಲಾಗುತ್ತಿದ್ದ ನಾಗರಾಜ್ ರಕ್ಷಣೆ ಸಾಧ್ಯವಾಗದೆ ಆತ ಸಾವನ್ನಪ್ಪಿದ್ದಾನೆ.

- Advertisement -

Related news

error: Content is protected !!