Thursday, May 9, 2024
spot_imgspot_img
spot_imgspot_img

ಕಡಬ : ವಿದ್ಯಾರ್ಥಿನಿಯ ಪತ್ರಕ್ಕೆ ಸ್ಪಂದಿಸಿದ ಸಿ.ಎಂ ಕಛೇರಿ

- Advertisement -G L Acharya panikkar
- Advertisement -

ಕಡಬ : ಮೂರನೇ ತರಗತಿ ಓದುವ ಪುಟಾಣಿ ಬಾಲಕಿಯೊಬ್ಬಳು ಬರೆದ ಪತ್ರಕ್ಕೆ ಮುಖ್ಯಮಂತ್ರಿ ಕಚೇರಿಯಿಂದ ತುರ್ತು ಸ್ಪಂದನೆ ಸಿಕ್ಕಿದೆ. ಪತ್ರದಲ್ಲಿ ಶಾಲೆಯ ಬಳಿ ತಂಬಾಕು ಮಾರಾಟ ಮಾಡುತ್ತಿದ್ದಾರೆಂಬ ದೂರನ್ನು ಪರಿಗಣಿಸಿ ಕಡಬ ಪೊಲೀಸರು ಅಂಗಡಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

ಶಾಲೆಯ ಬಳಿ ತಂಬಾಕು ಮಾರಾಟ ನಿಷೇದಿಸಿದ್ದರೂ ಅಂಗಡಿಯಲ್ಲಿ ನಿಯಮ ಮೀರಿ ಮಾರಾಟ ಮಾಡುತ್ತಿದ್ದ ಬಗ್ಗೆ ವಿದ್ಯಾರ್ಥಿನಿ ಬಿಳಿನೆಲೆ ಕೈಕಂಬ ಶಾಲಾ 3ನೇ ತರಗತಿ ವಿದ್ಯಾರ್ಥಿನಿ ಆಯೋರ ಎಂಬಾಕೆ ಪತ್ರಿಕೆಯೊಂದರ ಓದುಗರ ವಿಭಾಗಕ್ಕೆ ಬರೆದ ಪತ್ರವನ್ನು ಪತ್ರಿಕಾ ಕಛೇರಿಯವರು ಪತ್ರವನ್ನು ಮುಖ್ಯಮಂತ್ರಿ ಕಚೇರಿಗೆ ತಲುಪಿಸಿದ ಕೆಲವೇ ಗಂಟೆಗಳಲ್ಲಿ ಬಿಳಿನಲೆ ಕೈಕಂಬ ಶಾಲಾ ಬಳಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗೆ ಕಡಬ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

ಧಾರ್ಮಿಕ ಕೇಂದ್ರಗಳ ಬಳಿ ತಂಬಾಕು ನಿಷೇಧ ಮಾಡಿದ ವಿಚಾರ ಪತ್ರಿಕೆಯೊಂದರ ಮುಖಪುಟದಲ್ಲಿ ಪ್ರಕಟವಾಗಿತ್ತು. ಇದನ್ನು ಓದಿದ ಬಾಲಕಿ ಶಾಲೆಯಿಂದ 100 ಮೀಟರ್ ದೂರದವರೆಗೆ ತಂಬಾಕು ಮಾರಾಟ ಮಾಡಬಾರದೆಂದು ತಿಳಿದುಕೊಂಡಿದ್ದಾಳ ಶಾಲೆಯ ಬಳಿ ತಂಬಾಕು ವಸ್ತುಗಳ ಪೊಟ್ಟಣ ಬಿದ್ದಿರುವುದನ್ನು ಪೋಷಕರಲ್ಲಿ ಹೇಳಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಪೋಷಕರು ಹೇಳಿದಂತೆ ಬಾಲಕಿ ಪತ್ರಿಕಾ ಕಛೇರಿಗೆ ಪತ್ರ ಬರೆದಿದ್ದಾಳೆ.

ಪತ್ರಿಕಾ ಕಛೇರಿಯವರು ಆ ಪತ್ರವನ್ನು ಸಿ.ಎಂ ಕಛೇರಿಗೆ ಕಳಿಸಿದ್ದು, ಸಿ.ಎಂ ಕಛೇರಿಗೆ ಪತ್ರ ತಲುಪಿದ ಕೆಲವೇ ಗಂಟೆಯಲ್ಲಿ ಸಿಎಂ ಕಚೇರಿಯಿಂದ ಮಾಹಿತಿ ಪೊಲೀಸ್‌ ಇಲಾಖೆಗೆ ರವಾನೆಯಾಗಿದ್ದು, ಕಡಬ ಎಸ್‌ಐ ಅಭಿನಂದನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂದರ್ಭ ಶಾಲೆಯಿಂದ 20 ಮೀಟರ್ ದೂರದಲ್ಲಿ ನವೀನ್ ಎಂಬುವರಿಗೆ ಸೇರಿದ ಧನಶ್ರೀ ಫ್ಯಾನ್ಸಿ ಮತ್ತು ಫೂಟ್‌ವೇರ್ ಅಂಗಡಿಯಲ್ಲಿ ತಂಬಾಕು ಮತ್ತು ಸಿಗರೇಟ್ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆದು ತಂಬಾಕು ನಿಷೇಧ ಕಾಯ್ದೆಯಡಿ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!