Tuesday, June 23, 2026
spot_imgspot_img
spot_imgspot_img

ಮಂಗಳೂರು: ಒಳಚಡ್ಡಿಯಲ್ಲಿ ಚಿನ್ನವನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ- ಒಂದು ಕೋಟಿ ರೂ ಮೌಲ್ಯದ ಚಿನ್ನದೊಂದಿಗೆ ಕಸ್ಟಮ್ ಅಧಿಕಾರಿಗಳ ಬಲೆಗೆ ಬಿದ್ದ ಖದೀಮರು!

- Advertisement -
- Advertisement -

ಮಂಗಳೂರು: ಒಳಚಡ್ಡಿಯಲ್ಲಿ ಒಂದು ಕೋಟಿ ರೂ ಮೌಲ್ಯದ ಬಂಗಾರವನ್ನು ಸಾಗಿಸುತ್ತಿದ್ದ ಇಬ್ಬರು ಕಸ್ಟಮ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಫೈಜಲ್ ತೊಟ್ಟಿ ಮೆಲ್ಪಾರಂಬಾ ಮತ್ತು ಮೊಹಮ್ಮದ್ ಶುಹೈಬ್ ಮುಗು ಬಂಧಿತ ಆರೋಪಿಗಳು. ಇಬ್ಬರೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯವರಾಗಿದ್ದು, ಜನವರಿ 14 ರಂದು ಏರ್ ಇಂಡಿಯಾ ಫ್ಲೈಟ್ ಐ ಎಕ್ಸ್ 1384 ಮೂಲಕ ಶಾರ್ಜಾದಿಂದ ಮಂಗಳೂರಿಗೆ ಆಗಮಿಸಿದ್ದರು.

ಇವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ವೈಯಕ್ತಿಕವಾಗಿ ತಪಾಸಣೆ ನಡೆಸಿದಾಗ ಒಳಚಡ್ಡಿಯಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟದ್ದು ಕಂಡುಬಂದಿದೆ. ಇವರು 1.09 ಕೋಟಿ ಮೌಲ್ಯದ 24 ಪರಿಶುದ್ಧತೆಯ 2.154 ಕೆಜಿ ಚಿನ್ನವನ್ನು ಸಾಗಾಟ ಮಾಡುತ್ತಿದ್ದರು. ಆರೋಪಿಗಳಿಂದ 2.154 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Related news

error: Content is protected !!