Tuesday, July 1, 2025
spot_imgspot_img
spot_imgspot_img

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೋತ್ಸವ‌ ಆರಂಭ

- Advertisement -
- Advertisement -

ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜ.17ರಿಂದ ಜ.19 ರವರೆಗೆ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಪ್ರಥಮ ದಿನವಾದ ಜ.17ರಂದು ಬೆಳಿಗ್ಗೆ  9ಗಂಟೆಯಿಂದ  ವಿವಿಧ ಭಜನಾ ಮಂಡಳಿಯವರಿಂದ ಅರ್ಧ ಏಕಾಹ ಭಜನೆ, ಕುಣಿತ ಭಜನೆ ನಡೆಯಿತು.

108 ತೆಂಗಿನ ಕಾಯಿ ಗಣಪತಿ ಹವನ ನಡೆಯಿತು. ಮಧ್ಯಾಹ್ನ ಗಣಪತಿ ಹವನ ಪೂರ್ಣಾಹುತಿ, ಮಹಾಪೂಜೆ, ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ಸಹಿತ ನೂರಾರು‌ ಗ್ರಾಮಸ್ಥರು ಉಪಸ್ಥಿತರಿದ್ದರು.

ಜ. 19 ರ ಬೆಳಿಗ್ಗೆ ದೇವರ ಬಲಿ ,ಬಟ್ಟಲು ಕಾಣಿಕೆ , ದರ್ಶನ ಬಲಿ ಮತ್ತು ಪಿಲಿಚಾಮುಂಡಿ ದೈವದ ನೇಮೋತ್ಸವದ ನೇರ ಪ್ರಸಾರವು ನಿಮ್ಮ ನೆಚ್ಚಿನ ವಿಟಿವಿ ಯಲ್ಲಿ ಪ್ರಸಾರವಾಗಲಿದೆ.

- Advertisement -

Related news

error: Content is protected !!